ಬೆಳಗಾವಿ: ಹೊಸ ಜಿಲ್ಲೆ ಘೋಷಣೆ ತವಕದಲ್ಲಿರುವ ಚಿಕ್ಕೋಡಿಯ (Chkkodi) ಪ್ರಮುಖ ವೃತ್ತಗಳಲ್ಲಿ ಟ್ರಾಫಿಕ್ ಸಿಗ್ನಲ್ (Traffic Signal) ಅಳವಡಿಸದೇ ಇರುವುದು ಅವಘಡಗಳಿಗೆ (Accident) ಕಾರಣವಾಗುತ್ತಿದೆ. ಅಡ್ಡಾದಿಡ್ಡಿಯಾಗಿ ಓಡಾಡುವುದರಿಂದ ಮೇಲಿಂದ ಮೇಲೆ ಅಪಘಾತಗಳು ಸಂಭವಿಸುತ್ತಿವೆ.
ಚಿಕ್ಕೋಡಿ ಪಟ್ಟಣದಲ್ಲಿ ಅಂದಾಜು 50 ಸಾವಿರ ಜನಸಂಖ್ಯೆ ಇದೆ. ಬಹುತೇಕ ಎಲ್ಲ ಇಲಾಖಾ ಕಚೇರಿಗಳಿವೆ. ಹಲವು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು, ಶಾಲಾ-ಕಾಲೇಜುಗಳಿರುವುದರಿಂದ ನಿತ್ಯ ಸಾವಿರಾರು ವಿದ್ಯಾರ್ಥಿಗಳು ಪಟ್ಟಣಕ್ಕೆ ಬರುತ್ತಾರೆ. ಆದರೆ, ಇಲ್ಲಿನ ಸಂಚಾರ ದಟ್ಟಣೆ, ರಸ್ತೆ ನಿಯಮ ಮಿರಿ ಓಡಾಡುವ ವಾಹನಗಳಿಂದ ಪಾದಚಾರಿಗಳು ಸುರಕ್ಷಿತವಾಗಿ ರಸ್ತೆ ದಾಟುವುದೇ ಸವಾಲಾಗಿದೆ.
ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಅಪಘಾತದ ಅಪಾಯ ಹೆಚ್ಚಾಗಿದೆ. ಗೋಟೂರ-ವಿಜಯಪುರ ರಾಷ್ಟ್ರೀಯ ಹೆದ್ದಾರಿ, ನಿಪ್ಪಾಣಿ-ಮಹಾಲಿಂಗಪುರ ರಾಜ್ಯ ಹೆದ್ದಾರಿ ಕೂಡುವ ವೃತ್ತ ಇದಾಗಿದ್ದು, ಸಂಚಾರ ದಟಣೆ ಮಿತಿಮೀರುತ್ತಿದೆ. ಈ ವೃತ್ತದ ಬಳಿ ಪ್ರಮುಖ ಕಚೇರಿಗಳು, ಆಸ್ಪತ್ರೆ, ಅಂಚೆ ಕಚೇರಿ ಇರುವುದರಿಂದ ಜನರ ಓಡಾಟವೂ ಹೆಚ್ಚಾಗಿರುತ್ತದೆ.ಟ್ರಾಫಿಕ್ ಸಿಗ್ನಲ್ ಇಲ್ಲದ್ದರಿಂದ ನಿತ್ಯವೂ ಇಲ್ಲಿ ಸಣ್ಣಪುಟ್ಟ ಅಪಘಾತಗಳು ಸಾಮಾನ್ಯವಾಗಿವೆ. ಇದನ್ನೂ ಓದಿ: ಇದನ್ನೂ ಓದಿ: ಎನ್‌ಕೌಂಟರ್ ಭೀತಿ – ಏಕಕಾಲಕ್ಕೆ 103 ನಕ್ಸಲರ ಶರಣಾಗತಿ
ಬಸವೇಶ್ವರ ವೃತ್ತ ಮಾತ್ರವಲ್ಲದೆ ಇಂದಿರಾ ನಗರ ವೃತ್ತ, ಬಸ್ ನಿಲ್ದಾಣ ವೃತ್ತ, ಅಂಕಲಿಕೂಟ್, ಶಿಂಧಿಕೂಟ್ ವೃತ್ತಗಳಲ್ಲಿ ಸಂಚಾರ ದೀಪಗಳನ್ನು ಅಳವಡಿಸದ ಕಾರಣ ಸಂಚಾರ ನಿಮಯ ಮಿರಿ ವಾಹನಗಳು ಓಡಾಡುತ್ತಿದ್ದು, ಪಾದಚಾರಿಗಳಿಗೆ ಸುರಕ್ಷತೆ ಇಲ್ಲದಂತಾಗಿದೆ.
ಸುಗಮ ಸಂಚಾರಕ್ಕೆ ನೆರವಾಗಲು ಹಾಗೂ ಸಂಚಾರ ದಟ್ಟಣೆ ನಿಯಂತ್ರಿಸಲು ಪಟ್ಟಣದಲ್ಲಿ 2023ರಲ್ಲಿ ಪ್ರತ್ಯೇಕ ಸಂಚಾರ ಪೊಲೀಸ್ ಠಾಣೆ ಆರಂಭಿಸಲಾಗಿದೆ. 31 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಇಷ್ಟಾದರೂ ಸಂಚಾರ ಸಮಸ್ಯೆಗೆ ಪರಿಹಾರ ಸಿಗುತ್ತಿಲ್ಲ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಟ್ಟಣದ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳೆದ ಮೂರು ವರ್ಷದಲ್ಲಿ ಹಲವು ಅಪಘಾತಗಳು ಘಟಿಸಿದ್ದು, ಸಾಕಷ್ಟು ಸಾವು-ನೋವು ಸಂಭವಿಸಿವೆ. 2023ರಲ್ಲಿ 75, 2024 ರಲ್ಲಿ 76, 2025 ಸೆ.14ರ ವರೆಗೆ 49 ಅಪಘಾತಗಳು ನಡೆದಿದ್ದು, 2023 ರಲ್ಲಿ 34, 2024ರಲ್ಲಿ 20 ,2025 ರಲ್ಲಿ 14 ಜನ ಮೃತಪಟ್ಟಿದ್ದಾರೆ. ಒಟ್ಟಾರೆ 50ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.