ಬೆಂಗಳೂರು: ಅತಿ ಹೆಚ್ಚು ಬಾರಿ ಸಂಚಾರ ನಿಯಮ ಉಲ್ಲಂಘನೆ ಮಾಡಿ 50 ಸಾವಿರಕಿಂತ ಹೆಚ್ಚು ದಂಡ ಹೊಂದಿರೋ ಮಾಲೀಕರ ಪತ್ತೆ ಮಾಡಿ ಪೊಲೀಸರು ದಂಡ ವಸೂಲಿ ಮಾಡಿದ್ದಾರೆ.
ಪೂರ್ವ ವಿಭಾಗ ಸಂಚಾರಿ ಪೊಲೀಸರ ವಿಶೇಷ ಕಾರ್ಯಾಚರಣೆ ನಡೆಸಿ, ನಿಯಮ ಉಲ್ಲಂಗಿಸಿದವರಿಂದ ದಂಡ ವಸೂಲಿ ಮಾಡಿದ್ದಾರೆ. ಇದನ್ನೂ ಓದಿ: ಬಂಧನಕ್ಕೆ ವಾರಂಟ್ ಹೊರಡಿಸಬೇಕಾಗುತ್ತೆ – ಶ್ರೀರಾಮುಲುಗೆ ಹೈಕೋರ್ಟ್ ಎಚ್ಚರಿಕೆ
ಕಳೆದ 15 ದಿನದಲ್ಲಿ ಸುಮಾರು 69 ವಾಹನಗಳು ಹಾಗೂ ಮಾಲೀಕರ ಪತ್ತೆ ಮಾಡಿ, 8,975 ಪ್ರಕರಣದ 47.15 ಲಕ್ಷ ರೂ. ದಂಡ ಸಂಗ್ರಹಿಸಿದ್ದಾರೆ.
ಅದರಲ್ಲಿ 1,048 ಪ್ರಕರಣಗಳನ್ನು ಇತ್ಯರ್ಥ ಪಡಿಸಿ ಒಟ್ಟು 5.27 ಲಕ್ಷ ರೂ. ದಂಡ ವಸೂಲಿ ಮಾಡಲಾಗಿದೆ. ಇದನ್ನೂ ಓದಿ: ಮಸೀದಿಯೊಳಗೆ ಮುಸ್ಲಿಂ ಮಹಿಳೆ ಪ್ರಾರ್ಥನೆ ಮಾಡಿದ್ದಕ್ಕೆ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ!