ಟ್ರಾಫಿಕ್ ರೂಲ್ಸ್ ಬ್ರೇಕರ್ಸ್‍ಗೆ ಜನರಿಂದಲೇ ದಂಡಾಸ್ತ್ರ- ದಾವಣಗೆರೆ ಪೊಲೀಸರ ಹೊಸ ಪ್ಲಾನ್

Public TV
2 Min Read
DAVANAGERE SP

– ನಿಯಮ ಮೀರಿದ್ರೆ ಸಾರ್ವಜನಿಕರಿಂದಲೆ ದಂಡ

ದಾವಣಗೆರೆ: ಎಲ್ಲಿ ನೋಡಿದ್ರು ಟ್ರಾಫಿಕ್ ನಿಯಮ (Traffic Rules) ಉಲ್ಲಂಘನೆಗಳೇ ಜಾಸ್ತಿ, ಅಡ್ಡಾದಿಡ್ಡಿ ಓಡಾಡುವ ವಾಹನಗಳಿಂದ ಬೇರೆಯವರಿಗೂ ಕೂಡ ತೊಂದರೆ. ಟ್ರಾಫಿಕ್ ಪೊಲೀಸರು ಇದ್ದರೆ ಮಾತ್ರ ನಿಯಮ ಪಾಲನೆ ಇಲ್ಲವಾದ್ರೆ ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡುವವರಿಗೆ ಜನರೇ ದಂಡ ಹಾಕುವ ಅಧಿಕಾರವನ್ನು ಪೊಲೀಸ್ ಇಲಾಖೆ (Police Department) ನೀಡಿದೆ.

ಹೌದು, ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣ್ ಕುಮಾರ್ (Davanagere SP Arun Kumar) ಈ ರೀತಿಯ ವಿನೂತನ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಈಗಾಗಲೇ ಟ್ರಾಫಿಕ್ ಕಮೆಂಟೆಂಟ್ ರೂಂ ಮಾಡಿ ನಗರದಲ್ಲಿ ಸಂಚಾರಿ ನಿಯಮಗಳ ಉಲ್ಲಂಘನೆ ಮಾಡುವ ವಾಹನಗಳ ಮೇಲೆ ಸಿಸಿ ಕ್ಯಾಮೆರಾಗಳ ಮೂಲಕ ಹದ್ದಿನ ಕಣ್ಣು ಇಟ್ಟಿದ್ದಾರೆ. ಇದನ್ನೂ ಓದಿ: ಕರಾವಳಿ, ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಮುಂದಿನ 5 ದಿನ ಆರೆಂಜ್ ಅಲರ್ಟ್

ನಿಯಮ ಮೀರಿದವ್ರಿಗೆ ನೋಟಿಸ್ ಕಳುಹಿಸುವ ಕೆಲಸ ಮಾಡುತ್ತಿದ್ದಾರೆ. ಈಗ ಪೊಲೀಸ್ ಇಲಾಖೆ ದೂರವಾಣಿ ನಂಬರ್ ಅನ್ನು ಸಾರ್ವಜನಿಕರಿಗೆ ನೀಡಿದ್ದು, ನಿಯಮ ಉಲ್ಲಂಘನೆ ಮಾಡಿದವರ ಫೋಟೋವನ್ನು ಜನರೇ ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ತೆಗೆದು ವಾಟ್ಸಾಪ್ ಮಾಡುವ ಅವಕಾಶ ನೀಡಿದೆ. ಆಗ ಸಂಚಾರಿ ನಿಯಮ ಉಲ್ಲಂಘನೆ ಮಾಡಿದವರ ಮನೆಗೆ ದಂಡ ನೋಟಿಸ್ ಮೂಲಕ ಹೋಗುತ್ತದೆ.

ದಾವಣಗೆರೆಯಲ್ಲಿ ಕೆಲ ದಿನಗಳ ಹಿಂದೆಯೇ ಈ ಪ್ಲಾನ್ ಮಾಡಿದ್ದು, ಈಗಾಗಲೇ 15ಕ್ಕೂ ಹೆಚ್ಚು ಕೇಸ್‍ಗಳನ್ನು ಹಾಕಲಾಗಿದೆ. ಪೊಲೀಸರು ಯಾವಾಗಲೂ ಸಂಚಾರಿ ನಿಯಮಗಳ ಉಲ್ಲಂಘನೆ ಮಾಡುವವರ ಮೇಲೆ ಕಣ್ಣು ಇಡಲು ಸಾಧ್ಯವಾಗುವುದಿಲ್ಲ. ಅದ್ದರಿಂದ ಜನರೇ ಸಂಚಾರಿ ಉಲ್ಲಂಘನೆ ಮಾಡಿದವರ ಫೋಟೋವನ್ನು ತೆಗೆದು ವಾಟ್ಸಾಪ್ ಕಳುಹಿಸಿದರೆ ಅವರ ಮನೆಗಳಿಗೆ ನೊಟೀಸ್ ಮೂಲಕ ದಂಡ ವಿಧಿಸಬಹುದಾಗಿದೆ. ಇದರಿಂದ ಸಂಚಾರಿ ನಿಯಮಗಳು ಪಾಲನೆಯಾಗುತ್ತದೆ. ಇತ್ತ ಜನರಿಗೆ ಒಂದು ಜವಾಬ್ದಾರಿ ನೀಡಿದಂತಾಗುತ್ತದೆ ಅನ್ನೋದು ಪೊಲೀಸರ ಲೆಕ್ಕಾಚಾರವಾಗಿದೆ.

ಏನೇ ಆಗಲಿ ಪೊಲೀಸರು ಇಲ್ಲ ಎಂದು ವಾಹನಗಳನ್ನು ಅಡ್ಡಾದಿಡ್ಡಿ ಓಡಿಸುವವರಿಗೆ ಈ ಪ್ಲಾನ್‍ನಿಂದ ಒಳ್ಳೆಯ ಪಾಠ ಕಲಿಸಿದಂತಾಗಿದೆ. ಇನ್ನಾದರೂ ಸಂಚಾರಿ ನಿಗಮಗಳ ಪಾಲನೆ ಮಾಡ್ತಾರಾ ಜನ ಅನ್ನೋದು ಕಾದು ನೋಡಬೇಕಿದೆ.

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article