ಬೆಂಗಳೂರು: ಸಾರಿಗೆ ನಿಯಮ ಉಲ್ಲಂಘನೆ (Traffic Rules) ದಂಡ (Fine) ಪಾವತಿಸಲು ನೀಡಿದ್ದ ಶೇ. 50 ರಿಯಾಯಿತಿ ವಿನಾಯತಿಗೆ ಭರ್ಜರಿ ಪ್ರತಿಕ್ರಿಯೆ ಬರುತ್ತಿದೆ. ಕೇವಲ 5 ದಿನಕ್ಕೆ 50 ಕೋಟಿ ದಂಡ ವಸೂಲಿ ಆಗಿದೆ.
ಅರ್ಧ ಫೈನ್ ಕಟ್ಟಲು ತಾ ಮುಂದು ನಾ ಮುಂದು ಎಂದು ಜನರು ಮುಗಿಬೀಳುತ್ತಿದ್ದಾರೆ. ಅತ್ತ ಫೈನ್ ಕಟ್ಟುವುದಕ್ಕೆ ಹೆಚ್ಚಾಗ್ತಾ ಇದ್ರೆ ಇನ್ನೊಂದು ಜನ ಫೈನ್ ಕಟ್ಟೋಕೆ ಟೈಂ ಜಾಸ್ತಿ ಮಾಡಿ ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ. ಕಾನೂನು ಸೇವಾಪ್ರಾಧಿಕಾರದ ಮನವಿ ಮೇರೆಗೆ ರಾಜ್ಯ ಸರ್ಕಾರವು ಕೂಡ ಒಪ್ಪಿಗೆ ಸೂಚಿಸಿ ಶೇ. 50 ದಂಡ ಕಟ್ಟಿ ಇದರ ಸದುಪಯೋಗ ಮಾಡಿಕೊಳ್ಳುವುದಕ್ಕೆ ಆಫರ್ ಕೊಟ್ಟಿದೆ.
Advertisement
Advertisement
ಇದನ್ನು ಸರಿಯಾಗಿ ಬಳಕೆ ಮಾಡಿಕೊಂಡ ಸಾರ್ವಜನಿಕರು ಕೋಟಿ ಕೋಟಿ ದಂಡವನ್ನು ಕಟ್ಟಿ ತಮ್ಮ ಕೇಸ್‌ಗಳನ್ನು ಕ್ಲಿಯರ್ ಮಾಡಿಕೊಳ್ಳುತ್ತಿದ್ದಾರೆ. 5 ದಿನದಲ್ಲಿ 50 ಕೋಟಿ ದಂಡ ವಸೂಲಿ ಮಾಡಿದ್ದಾರೆ. ಆನ್ ಲೈನ್ ಅಲ್ಲಿಯೇ ಅತಿ ಹೆಚ್ಚು ದಂಡ ಪಾವತಿ ಮಾಡಿದ್ದು, 1 ಕೋಟಿ 80 ಲಕ್ಷ ಪ್ರಕರಣಗಳಲ್ಲಿ 15 ಲಕ್ಷ ಕೇಸ್ ಗಳು ಮಾತ್ರ ವಿಲೇವಾರಿಯಾಗಿದೆ. ಇನ್ನೂ 4 ದಿನ ಕಾಲಾವಕಾಶ ಇರೋದ್ರಿಂದ ಜನ ದಂಡ ಪಾವತಿ ಮಾಡೋಕೆ ಬರ್ತಾ ಇದ್ದಾರೆ. ಇದನ್ನೂ ಓದಿ: ಡಿಕೆಶಿ ಪುತ್ರಿ ಐಶ್ವರ್ಯಗೆ CBI ನೋಟಿಸ್; 10 ದಿನದಲ್ಲಿ ವಿಚಾರಣೆಗೆ ಹಾಜರಾಗಲು ಸೂಚನೆ
Advertisement
ದಿನವಾರು ಕೇಸ್‌ಗಳು ದಂಡ ವಸೂಲಿ: ಫೆ. 3ರಂದು 7 ಕೋಟಿ 41 ಸಾವಿರ ರೂ. ದಂಡ ವಸೂಲಿಯಾಗಿದ್ದರೇ, ಫೆ. 4ಕ್ಕೆ 9 ಕೋಟಿ 27 ಸಾವಿರ ರೂ. ವಸೂಲಿಯಾಗಿದೆ. ಫೆ. 5ರಂದು 7 ಕೋಟಿ 50 ಲಕ್ಷ ರೂ., ಫೆ. 6ರಂದು 9 ಕೋಟಿ 57 ಲಕ್ಷ ರೂ. ದಂಡ ವಸೂಲಿಯಾಗಿದೆ. ಫೆ. 7ರಂದು 8 ಕೋಟಿ 13 ಲಕ್ಷ ರೂ. ಹಾಗೂ ಫೆ. 8 (12 ಗಂಟೆ) ರಂದು 3 ಕೋಟಿ ರೂ. ದಂಡ ವಸೂಲಿಯಾಗಿದ್ದು, ಒಟ್ಟು 46 ಕೋಟಿ 45 ಲಕ್ಷ (ಸಂಜೆಯ ಒಳಗೆ 50 ಕೋಟಿ) ರೂ. ವಸೂಲಿಯಾಗಿದೆ.
Advertisement
ಇನ್ನು ಇದೇ ಶನಿವಾರ ಅಂದ್ರೆ ಫೆಬ್ರವರಿ 11 ರ ತನಕ ಈ ರೀತಿ ವಿನಾಯಿತಿ ಅವಕಾಶ ಇದ್ದು, ಇದರ ಸದುಪಯೋಗ ಪಡಿಸಿಕೊಳ್ಳಬಹುದು. ಇನ್ನು ಸರ್ಕಾರ ನೀಡಿಋುವ ಕಾಲಾವಧಿಯಲ್ಲಿ ದಂಡ ಪಾವತಿ ಮಾಡೋದು ಕಷ್ಟ. ಇನ್ನೂ ಹೆಚ್ಚು ದಿನಗಳ ಕಾಲಾವಕಾಶವನ್ನು ನೀಡಬೇಕು ಎಂದು ಜನ ಕೇಳಿಕೊಂಡಿದ್ದಾರೆ. ಇದನ್ನೂ ಓದಿ: ಬ್ರಾಹ್ಮಣರನ್ನು ಉದ್ದೇಶ ಪೂರ್ವಕವಾಗಿ ತುಳಿಯುತ್ತಿದ್ದಾರೆ: ಸುಬ್ಬರಾಯ ಹೆಗ್ಗಡೆ
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k