– ಆರ್‌ಟಿಓ ಜೊತೆ ಕಾರ್ಯಚರಣೆಗಿಳಿದ ಪೊಲೀಸ್ ಇಲಾಖೆ
ಬೆಂಗಳೂರು: ನಗರದಲ್ಲಿ ಹಳಿ ತಪ್ಪಿರೋ ಟ್ರಾಫಿಕ್ (Traffic) ಸಮಸ್ಯೆ ಪೊಲೀಸ್ ಇಲಾಖೆಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಹಲವು ನಿಯಮವಳಿಗಳನ್ನ ಜಾರಿ ಮಾಡಿದರೂ ನಗರದ ಟ್ರಾಫಿಕ್ ಹತೋಟಿಗೆ ಬರುತ್ತಿಲ್ಲ. ಏನಾದರೂ ಮಾಡಿ ಸಮಸ್ಯೆಗೆ ಮುಕ್ತಿ ನೀಡಲು ಪ್ರಯತ್ನ ಮಾಡುತ್ತಿರುವ ಪೊಲೀಸರು ಈಗ ಆರ್‌ಟಿಓ (RTO) ಜೊತೆ ಸೇರಿ ಒನ್ ವೇ ಸವಾರರ ವಿರುದ್ಧ ಸಮರಕ್ಕೆ ಮುಂದಾಗಿದ್ದಾರೆ.
ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗಳಿಗೆ ಸವಾರರ ಅವೈಜ್ಞಾನಿಕ ಒನ್ ವೇ ಸಂಚಾರವೇ ಮುಖ್ಯ ಕಾರಣ ಎಂಬ ಅಂಶವೀಗ ಸಂಚಾರಿ ಪೊಲೀಸರು ನಡೆಸಿದ ಆಂತರಿಕ ಸಮೀಕ್ಷೆಯಲ್ಲಿ ಗೊತ್ತಾಗಿದೆ. ಟ್ರಾಫಿಕ್ ಸರ್ವೆಯಲ್ಲಿ ರೋಚಕ ಅಂಶವನ್ನು ಪತ್ತೆ ಮಾಡಿದ ಪೊಲೀಸರು ಸಮಸ್ಯೆಗೊಂದು ಮದ್ದು ಕಂಡು ಹಿಡಿಯುವತ್ತ ಚಿತ್ತ ನೆಟ್ಟಿದ್ದಾರೆ. ಇದೇ ಕಾರಣಕ್ಕೆ ಆರ್‌ಟಿಓ ಜೊತೆ ಸೇರಿಕೊಂಡು ನಗರದ ಹಲವು ಕಡೆ ಓನ್ ವೇ ಸವಾರರ ವಿರುದ್ಧ ಸಮರ ಸಾರಿದ್ದಾರೆ. ಇದನ್ನೂ ಓದಿ: ಬೆಳಗಾವಿ | ದೇಶದ ಅತಿದೊಡ್ಡ ರಾಬರಿ ಪ್ರಕರಣ ಬೆಳಕಿಗೆ – ಚಲಾವಣೆ ಇಲ್ಲದ 400 ಕೋಟಿ ದರೋಡೆ
ನಗರದ ಹಲವೆಡೆ ಸವಾರರಿಗೆ ಕಿರಿಕಿರಿ ಜೊತೆ ಟ್ರಾಫಿಕ್ ಸಮಸ್ಯೆ ಹೆಚ್ಚಾಗುತ್ತಿದೆ. ಓನ್ ವೇ (One Way) ಸವಾರರೇ ಇಷ್ಟೆಲ್ಲ ಅವಾಂತರಕ್ಕೆ ಕಾರಣವಂತೆ. 50 ಮೀಟರ್, 100 ಮೀಟರ್ ಅಷ್ಟೇ ಅಂತ ಟ್ರಾಫಿಕ್ ನಡುವೆಯೂ ಒನ್ ವೇಗಳಲ್ಲಿ ನುಗ್ಗಿ ಸಂಚಾರ ಮಾಡುತ್ತಾರೆ. ಇದರ ಪರಿಣಾಮ ಎದುರಿಗೆ ಬರುವ ಸವಾರರಿಗೆ ಕಿರಿಕಿರಿ ಹೆಚ್ಚಾಗುತ್ತಿದೆ. ಈ ಎಲ್ಲಾ ಕಾರಣಗಳಿಂದಲೇ ನಗರದ ಟ್ರಾಫಿಕ್ ಸಮಸ್ಯೆ ನಿವಾರಣೆಗೆ ಮೊದಲ ಹೆಜ್ಜೆ ಇಟ್ಟಿದ್ದಾರೆ. ಇದನ್ನೂ ಓದಿ: ಇರಾನ್‌ನಲ್ಲಿ ಹಿಂಸಾಚಾರ, ಯುದ್ಧದ ಆತಂಕ – ರಂಜಾನ್ ಹೊಸ್ತಿಲಲ್ಲೇ ಡ್ರೈಫ್ರೂಟ್ಸ್ ಸಪ್ಲೈ ಬಂದ್
ಆರ್‌ಟಿಓ ಅಧಿಕಾರಿಗಳ ಜೊತೆ ಕೈ ಜೋಡಿಸಿರುವ ಪೊಲೀಸರು, ಇಂತಹ ಸವಾರರನ್ನ ಪತ್ತೆ ಹಚ್ಚಿ ಅಂಥವರ ಡಿಎಲ್ ಕ್ಯಾನ್ಸಲೇಷನ್‌ಗೆ ಮುಂದಾಗಿದ್ದಾರೆ. ಶೀಘ್ರ ತಂಡಗಳಾಗಿ ಕಾರ್ಯಚರಣೆಗೆ ಇಳಿಯಲಿರುವ ಪೊಲೀಸರು, ಒನ್ ವೇ ಸವಾರರನ್ನ ಪತ್ತೆ ಹಚ್ಚಿ ಅವರ ಡಿಎಲ್‌ಗಳನ್ನ ನೇರವಾಗಿ ಆರ್‌ಟಿಓಗೆ ರವಾನೆ ಮಾಡಲಿದ್ದಾರೆ. ಬಳಿಕ ಡಿಎಲ್‌ಗಳನ್ನ ಸಾರಿಗೆ ಅಧಿಕಾರಿಗಳು ಪೊಲೀಸರ ಸೂಚನೆಯಂತೆ ಮೂರು ತಿಂಗಳು ಅಮಾನತ್ತಿನಲ್ಲಿ ಇಡಲಿದ್ದಾರೆ. ಇದನ್ನೂ ಓದಿ: Union Budget 2026: ರಕ್ಷಣೆಯಿಂದ ಆಟೋಮೊಬೈಲ್‌ವರೆಗೆ; ಯಾವ್ಯಾವ ವಲಯಕ್ಕೆ ನಿರೀಕ್ಷೆ ಏನು?

