ಬೆಂಗಳೂರು: ನಗರದ ಸಂಚಾರಿ ಪೊಲೀಸರು ಸಂಚಾರಿ ಬೋರ್ಡ್‍ಗಳಲ್ಲಿ ಕನ್ನಡ ಬಳಸೋಕೆ ಶುರು ಮಾಡಿದ್ದಾರೆ. ಆದರೆ ಟ್ರಾಫಿಕ್ ಪೊಲೀಸರ ಈ ಕನ್ನಡ ಇದೀಗ ಅಪಹಾಸ್ಯಕ್ಕೀಡಾಗಿದೆ.
ಕನ್ನಿಂಗ್ ಹ್ಯಾಂ ರಸ್ತೆಯಲ್ಲಿ ಮೂರ್ನಾಲ್ಕು ಕಡೆ ಒನ್ ವೇ ಸೈನ್ ಬೋರ್ಡ್‍ಗಳನ್ನು ಹಾಕಲಾಗಿದೆ. ಈ ಸೈನ್ ಬೋರ್ಡ್‍ಗಳಲ್ಲಿ ಒನ್ ವೇ ಎಂದು ಇಂಗ್ಲೀಷ್‍ನಲ್ಲಿ ಬರೆದಿದ್ದು, ಕೆಳಗಡೆ ಕನ್ನಡದಲ್ಲಿ ಸಹ ಬರೆಯಲಾಗಿದೆ.
Advertisement
ಈ ಕನ್ನಡ ಯಾರಿಗೂ ಅರ್ಥವಾಗುವುದಿಲ್ಲ. ಏಕೆಂದರೆ ಒನ್ ವೇ ಅಂದ್ರೆ ‘ಒಂದು ರೀತಿಯಲ್ಲಿ’ ಅಂತೆ. ಗೂಗಲ್ ಟ್ರಾನ್ಸ್ ಲೇಟ್‍ನ ಯಥಾವತ್ತಾಗಿ ಇಳಿಸಿ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ನಗರ ಪೊಲೀಸರು ಅಪಹಾಸ್ಯಕ್ಕೀಡಾಗಿದ್ದಾರೆ.