ಶಿವಮೊಗ್ಗ: ಸಂಚಾರ ಪೊಲೀಸ್ ಠಾಣೆಯಲ್ಲೇ (Traffic Police Station) ಹೆಡ್ ಕಾನ್ಸ್ಟೇಬಲ್‌ವೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಿವಮೊಗ್ಗ ಪಶ್ಚಿಮ ಸಂಚಾರ ಪೊಲೀಸ್ ಠಾಣೆಯಲ್ಲಿ ನಡೆದಿದೆ.
ಮಹಮ್ಮದ್ ಜಕ್ರೀಯಾ (55) ಆತ್ಮಹತ್ಯೆ ಮಾಡಿಕೊಂಡ ಹೆಡ್ ಕಾನ್ಸ್ಟೇಬಲ್. ಇದನ್ನೂ ಓದಿ: ಪ್ರವಾಸಕ್ಕೆ ಮಕ್ಕಳನ್ನ ಫ್ಲೈಟ್‌ನಲ್ಲಿ ಕರೆದೊಯ್ದ ಸರ್ಕಾರಿ ಶಾಲೆ – ಇಡೀ ರಾಜ್ಯದಲ್ಲಿ ಕಾಫಿನಾಡೇ ಫಸ್ಟ್!
ಒಂದು ತಿಂಗಳ ರಜೆಯಲ್ಲಿದ್ದ ಜಕ್ರಿಯಾ 2 ದಿನಗಳ ಹಿಂದಷ್ಟೇ ಕರ್ತವ್ಯಕ್ಕೆ ಹಾಜರಾಗಿದ್ದರು, ಸಹ ಸಿಬ್ಬಂದಿ ನಾಸೀರ್ ಅಹಮ್ಮದ್ ಕಿಂಡಲ್ ಮಾಡ್ತಿದ್ದ ಅಂತ ಡೆತ್ ನೋಟ್ (Death Note) ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಪಶ್ಚಿಮ ಸಂಚಾರ ಪೊಲೀಸ್ ಠಾಣೆಗೆ ಎಸ್ಪಿ ನಿಖಿಲ್ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಇದನ್ನೂ ಓದಿ: 66 ಅಂತಾರಾಷ್ಟ್ರೀಯ ಸಂಸ್ಥೆಗಳಿಂದ ಹೊರ ನಡೆದ ಅಮೆರಿಕ – ಟ್ರಂಪ್ ನಿರ್ಧಾರ ಮಾಡಿದ್ದೇಕೆ?


