ಬೆಂಗಳೂರು: ಸಂಚಾರ ದಟ್ಟಣೆಗೂ ಮುನ್ನವೇ ಬಸ್ ರಿಪೇರಿ ಮಾಡಿ ಟ್ರಾಫಿಕ್ ಪೊಲೀಸರು ತಮ್ಮ ಕರ್ತವ್ಯ ನಿಷ್ಠೆಯನ್ನು ಪಾಲಿಸಿದ್ದಾರೆ.
ಹೆಬ್ಬಾಳ ಪ್ಲೈಓವರ್ ಮೇಲೆ ಕೆಎಸ್‍ಆರ್ ಟಿಸಿ ಬಸ್ ಪಂಚರ್ ಆಗಿ ನಿಂತಿತ್ತು. ನಗರ ಸಂಚಾರಿ ಪೊಲೀಸರು ಸಂಚಾರ ದಟ್ಟಣೆಗೂ ಮೊದಲೇ ಎಚ್ಚೆತ್ತುಕೊಂಡು ತಮ್ಮ ಕರ್ತವ್ಯ ಪ್ರಜ್ಞೆ ಮೆರೆಯುವ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.
ಆರ್.ಟಿ.ನಗರ ಠಾಣೆಯ ಪಿಐ ಫಿರೋಜ್ ಖಾನ್, ಪಿಎಸ್‍ಐ ನಾಗಭೂಷಣ್, ಪಿಸಿ ರಾಜಣ್ಣ, ಪಿಸಿ ಮಧುಸೂಧನ್ ಅವರು ಕೆಎಸ್ಆರ್ ಟಿಸಿ ಮೆಕ್ಯಾನಿಕ್ ಜೊತೆ ಸೇರಿ ಕೆಲಸ ಮಾಡಿದ್ದಾರೆ. ಈ ಎಲ್ಲ ಪೊಲೀಸರ ಸೇವಾ ಕಾರ್ಯಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಮೆಚ್ಚುಗೆ ಸಲ್ಲಿಸಿದ್ದಾರೆ.
Our staff doing beyond their duty to ease your pain. https://t.co/kN9LB3K8FJ
— Dr.M.A.Saleem, IPS (@SplCPTraffic) June 30, 2018
ಹೆಚ್ಚುವರಿ ಸಂಚಾರಿ ಪೊಲೀಸ್ ಆಯುಕ್ತ ಆರ್. ಹಿತೇಂದ್ರರವರು ಮೆಚ್ಚುಗೆ ಸಲ್ಲಿಸಿ ಕಾರ್ಯ ನಿರ್ವಹಿಸುತ್ತಿದ್ದ ಫೋಟೋವನ್ನು ಟ್ವಿಟ್ಟರಿನಲ್ಲಿ ಹಂಚಿಕೊಂಡು ಅದಕ್ಕೆ, “ನಿಮ್ಮ ಕಷ್ಟ ಸುಲಭವಾಗಲಿ ಎಂದು ನಮ್ಮ ಸಿಬ್ಬಂದಿ ಕರ್ತವ್ಯಕ್ಕೂ ಮೀರಿ ಕೆಲಸ ಮಾಡುತ್ತಿದ್ದಾರೆ” ಎಂದು ಬರೆದುಕೊಂಡಿದ್ದಾರೆ.
ಇನ್ನೂ ಮಳೆ ಬಂದ ಕಾರಣ ರಸ್ತೆಯಲ್ಲಿ ನೀರು ನಿಂತು ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿತ್ತು. ಆಗ ಸಂಚಾರಿ ಪೊಲೀಸರು ಅದನ್ನು ಸರಿ ಪಡಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಸದ್ಯ ಸಂಚಾರಿ ಪೊಲೀಸರ ಕರ್ತವ್ಯ ಪ್ರಜ್ಞೆಗೆ ಸಾರ್ವಜನಿಕರು ಅಭಿನಂದನೆ ಸಲ್ಲಿಸಿದ್ದಾರೆ.
@AddlCPTraffic @DCPTrWestBCP @AcpSouthdvn @blrcitytraffic @BlrCityPolice
Water logging due to rain at kanakapura rd #SlightlySlowmoving traffic. pic.twitter.com/XpiJvmySOE
— K.S.LAYOUT TRAFFIC BTP (@kslayoutrfps) June 30, 2018