ಚೆನ್ನೈ: ಪ್ರಧಾನಿ ಮೋದಿ ದೇಶಾದ್ಯಂತ 21 ದಿನ ಲಾಕ್‍ಡೌನ್ ಘೋಷಿಸಿದ್ದಾರೆ. ಮೋದಿ ಆದೇಶವನ್ನು ಕೆಲವರು ಗಂಭೀರವಾಗಿ ತೆಗೆದುಕೊಂಡು ಪಾಲಿಸುತ್ತಿದ್ದಾರೆ. ಮತ್ತೆ ಕೆಲವರು ರಸ್ತೆಯಲ್ಲಿ ತಿರುಗಾಡುತ್ತಿದ್ದಾರೆ. ಇದೀಗ ವಿಡಿಯೋವೊಂದು ವೈರಲ್ ಆಗಿದ್ದು, ಇದರಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ವಾಹನ ಸವಾರರ ಬಳಿ ಕಣ್ಣೀರು ಹಾಕಿ ಕೈಮುಗಿದು ಮನೆಯಿಂದ ಹೊರ ಬರಬೇಡಿ ಎಂದು ಮನವಿ ಮಾಡಿಕೊಳ್ಳುತ್ತಿದ್ದಾರೆ.
ವೈರಲ್ ಆಗಿರುವ ವಿಡಿಯೋದಲ್ಲಿ ತಮಿಳುನಾಡಿನ ಟ್ರಾಫಿಕ್ ಪೊಲೀಸರೊಬ್ಬರು ಕೈಮುಗಿದು ಕಣ್ಣೀರು ಹಾಕುತ್ತಾ ವಾಹನ ಸವಾರರಿಗೆ ದಯವಿಟ್ಟು ಮನೆಯಿಂದ ಹೊರಬರಬೇಡಿ ಎಂದು ಮನವಿ ಮಾಡಿಕೊಳ್ಳುತ್ತಿದ್ದಾರೆ. ಪೊಲೀಸ್ ಅಧಿಕಾರಿ ಕಣ್ಣೀರು ಹಾಕಿ ಕೈಮುಗಿದುಕೊಂಡು ಮನವಿ ಮಾಡಿಕೊಂಡರು ವಾಹನ ಸವಾರರು ಅವರ ಮಾತನ್ನು ಕೇಳುತ್ತಿಲ್ಲ. ಈ ವೈರಲ್ ವಿಡಿಯೋ ನೋಡಿದ ನೆಟ್ಟಿಗರು ವಾಹನ ಸವಾರರ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ.
Advertisement
#coronavillains@republic
The traffic cop is pleading with folded hands to turn back. No one seems to heed. pic.twitter.com/06vX4tMPUy
— स्वामी (@Swami_65) March 25, 2020
Advertisement
ದೇಶಾದ್ಯಂತ ಲಾಕ್‍ಡೌನ್ ಆಗಿದ್ದು, ಪ್ರಧಾನಿ ಮೋದಿ, ರಾಜ್ಯ ಸರ್ಕಾರ, ಪೊಲೀಸರು, ಮಾಧ್ಯಮದವರು ಮನೆಯಿಂದ ಹೊರಬರಬೇಡಿ ಎಂದು ಮನವಿ ಮಾಡಿಕೊಳ್ಳುತ್ತಿದ್ದಾರೆ. ಸಾಮಾಜಿಕ ದೂರವಿರುವುದರಿಂದ ಕೊರೊನಾ ಅಪಾಯವನ್ನು ಕಡಿಮೆ ಮಾಡಬಹುದು ಎಂಬ ಮಾಹಿತಿಯನ್ನು ನೀಡಲಾಗುತ್ತಿದೆ. ದೇಶದಲ್ಲಿ ಕೆಲವರು ಸಾಮಾಜಿಕ ದೂರವಿರುವ ನಿಯಮವನ್ನು ಪಾಲಿಸುತ್ತಿದ್ದಾರೆ. ಮತ್ತೆ ಕೆಲವರು ಮೋದಿ ಆದೇಶವನ್ನು ಪಾಲಿಸುತ್ತಿಲ್ಲ.