ಚಿಕ್ಕೋಡಿ: ಇಲ್ಲಿಯ ಟ್ರಾಫಿಕ್ ಪೊಲೀಸರು ಅಂಧಾ ದರ್ಬಾರ್ ನಡೆಸಿದ್ದಾರೆ. ದ್ವಿಚಕ್ರ ವಾಹನ ಸವಾರರನ್ನೇ ಟಾರ್ಗೆಟ್ ಮಾಡಿಕೊಂಡು ಲೈಸೆನ್ಸ್ ಇಲ್ಲ, ವೇಗ ಮಿತಿ ಹೆಚ್ಚಳ ಹೀಗೆ ಹಲವು ಕಾರಣ ಹೇಳಿ ಸರ್ಕಾರಿ ರಸೀದಿ ನೀಡದೇ ಹಣ ವಸೂಲಿ ಮಾಡ್ತಿದ್ದಾರೆ.
ಚಿಕ್ಕೋಡಿ ನಗರದಲ್ಲಿ ಪೊಲೀಸ್ ಪೇದೆ ಹಾಗೂ ಅಧಿಕಾರಿಗಳು ಜನರಿಂದ ದಂಡ ಪಡೆದು ರಸೀದಿ ನೀಡದೇ ಜೇಬಿನಲ್ಲಿ ಹಣ ಸೇರಿಸಿಕೊಳ್ಳುತ್ತಿದ್ದಾರೆ. ಇವರಿಗೆ ಹಣ ನೀಡಲು ಕಿರಿಕಿರಿ ಮಾಡಿದ್ರೆ ಕೇಸ್ ದಾಖಲಿಸಿ ಕೋರ್ಟ್‍ಗೆ ಕಳಿಸುವ ಬೆದರಿಕೆ ಹಾಕುತ್ತಾರೆ ಎಂದು ಜನರು ಗೋಳಾಡುತ್ತಿದ್ದಾರೆ.
ನಗರದ ಹೊರವಲಯದಲ್ಲಿ ದಿನ ನಿತ್ಯ ವೇಗ ನಿಯಂತ್ರಣ ವಾಹನ ತೋರಿಸಿ ಜನರಿಂದ ಹಣ ವಸೂಲಿ ಮಾಡುವ ದೃಶ್ಯಗಳು ಪಬ್ಲಿಕ್ ಟಿವಿಗೆ ಲಭ್ಯವಾಗಿವೆ.