ಬೆಂಗಳೂರು: ಕೊರೊನಾ ವೈರಸ್ ಎಫೆಕ್ಟ್ ನಗರದ ಟ್ರಾಫಿಕ್ ಪೊಲೀಸರಿಗೂ ತಟ್ಟಿದೆ. ಬೆಂಗಳೂರಿನ ಟೆಕ್ಕಿಯೊಬ್ಬರಿಗೆ ಕೊರೊನಾ ವೈರಸ್ ಧೃಡಪಟ್ಟ ಹಿನ್ನೆಲೆಯಲ್ಲಿ ನಗರದ ಟ್ರಾಫಿಕ್ ಪೊಲೀಸರು ಡ್ರಿಂಕ್ & ಡ್ರೈವ್ ಚೆಕ್ ಮಾಡುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ.
ಹೆಸರು ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರು, ಈಗಾಗಲೇ ಬೆಂಗಳೂರಿಗೆ ಕೊರೊನಾ ಬಂದಿರುವ ವಿಚಾರ ತಿಳಿದು ನಮ್ಮ ಸಿಬ್ಬಂದಿ ಭಯಗೊಂಡಿದ್ದಾರೆ. ಡ್ರಿಂಕ್ & ಡ್ರೈವ್ ಚೆಕ್ ಮಾಡುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಬಾಯಿ ವಾಸನೆ ಮೂಲಕ ನಾವು ಡ್ರಿಂಕ್ & ಡ್ರೈವ್ ಚೆಕ್ ಮಾಡಬೇಕು. ನಂತರ ಡಿಡಿ ಮಿಷಿನ್‍ನಲ್ಲಿ ಚೆಕ್ ಮಾಡುವುದು. ಹಾಗಾಗಿ ನಮಗೂ ಕೊರೊನಾ ವೈರಸ್ ತಗುಲುವ ಸಾಧ್ಯತೆ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಇದನ್ನೂ ಓದಿ: ಬೆಂಗಳೂರು ಟೆಕ್ಕಿಗೆ ಕೊರೋನಾ ಬಂದಿದ್ದು ಹೇಗೆ?
Advertisement
Advertisement
ಈಗಾಗಲೇ ಕೆಲ ವಿದೇಶಗಳಲ್ಲಿ ಹ್ಯಾಂಡ್ ಶೇಕ್ ಮಾಡುವುದು, ಪರಸ್ಪರ ಚುಂಬಿಸುವುದನ್ನು ನಿಷೇಧಿಸಲಾಗಿದೆ. ಈ ಬಗ್ಗೆ ನಮ್ಮ ಮೇಲಾಧಿಕಾರಿಗಳ ಗಮನ ಹರಿಸಬೇಕು, ನಮಗೂ ಫ್ಯಾಮಿಲಿಗಳಿವೆ. ಏನಾದರೂ ಹೆಚ್ಚು ಕಮ್ಮಿಯಾದರೆ ಯಾರು ಹೊಣೆ ಎಂದು ತಮ್ಮ ಅಸಹಾಯಕತೆ ವ್ಯಕ್ತಪಡಿಸಿದರು. ಇದನ್ನೂ ಓದಿ: 24 ವರ್ಷದ ಬೆಂಗ್ಳೂರು ಟೆಕ್ಕಿಗೆ ಕೊರೋನಾ ವೈರಸ್
Advertisement
ಬೆಂಗಳೂರಿನಲ್ಲಿ ಕೆಲಸ ಮಾಡುವ ಹೈದರಾಬಾದ್ ಮೂಲದ ಟೆಕ್ಕಿಗೆ ಕೊರೊನಾ ವೈರಸ್ ಪತ್ತೆಯಾಗಿದ್ದು, ಟೆಕ್ಕಿಗೆ ಹೈದರಾಬಾದ್‍ನಲ್ಲಿ ಚಿಕಿತ್ಸೆ ಮುಂದುವರಿದಿದೆ. ಇದರ ಎಫೆಕ್ಟ್ ಈಗ ಪೊಲೀಸರಿಗೂ ತಟ್ಟಿದೆ.