ಬೆಂಗಳೂರು: ವಿಶೇಷವಾಗಿ ಕಾರ್ಯನಿರ್ವಹಿಸುವ ಸುಜುಕಿ ಜಿಕ್ಸರ್ ಬೈಕನ್ನು ಸರ್ಕಾರ ಟ್ರಾಫಿಕ್ ಪೊಲೀಸರಿಗೆ ಹಸ್ತಾಂತರ ಮಾಡಿದೆ.
ನಗರದ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಗೃಹ ಸಚಿವ ಪರಮೇಶ್ವರ್ ನೇತೃತ್ವದಲ್ಲಿ ಕ್ರೈಂ ರಿವ್ಯೂ ಸಭೆ ನಡೆಯಿತು. ಇದೇ ವೇಳೆ ಬೆಂಗಳೂರಿನ ಟ್ರಾಫಿಕ್ ಪೊಲೀಸರಿಗೆ ಬೈಕ್ ಕೊಡುಗೆ ನೀಡಲಾಗಿದೆ.
ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಅವರು ಟ್ರಾಫಿಕ್ ಪೊಲೀಸರಿಗೆ ಬೈಕ್ ಕೀಗಳನ್ನು ಹಸ್ತಾಂತರಿಸಿದರು. ಜೊತೆಗೆ ಅವರೇ ಮುಂದೆ ನಿಂತು ಚಾಲನೆಯನ್ನು ಕೂಡ ನೀಡಿದ್ದಾರೆ.
ಸುಜುಕಿ ಕಂಪನಿಯಿಂದ 5 ಜಿಕ್ಸರ್ ಬೈಕ್ ಗಳನ್ನು ಕೊಡುಗೆಯಾಗಿ ನೀಡಲಾಗಿದೆ. ಈ ಬೈಕ್ ಟ್ರಾಫಿಕ್ ನಲ್ಲಿ ವಿಶೇಷವಾಗಿ ಕಾರ್ಯನಿರ್ವಹಿಸುತ್ತವೆ. ಟ್ರಾಫಿಕ್ ನಿಯಂತ್ರಣದ ಎಲ್ಲ ವಿಶೇಷತೆಯನ್ನು ಈ ಬೈಕ್ ಹೊಂದಿದೆ. ಪ್ರಾಥಮಿಕ ಚಿಕಿತ್ಸೆ ಕಿಟ್, ಟ್ರಾಫಿಕ್ ಕ್ಲಿಯರ್ ಸೈರನ್, ರೈಡಿಂಗ್ ಕಂಫರ್ಟಬಲ್ ಮತ್ತು ವಾಕಿ ಟಾಕಿ ವ್ಯವಸ್ಥೆಯನ್ನು ಈ ಬೈಕ್ ಹೊಂದಿದೆ.
ಸದ್ಯಕ್ಕೆ ಈ ಬೈಕ್ ಪ್ರಾಯೋಗಿಕವಾಗಿ ಯಶಸ್ವಿಯಾದರೆ ಮುಂದಿನ ದಿನಗಳಲ್ಲಿ ಅಳವಡಿಸಿಕೊಳ್ಳಲು ಪೊಲೀಸರ ಚಿಂತನೆ ಮಾಡಿದ್ದಾರೆ. ಈ ಸಭೆಯಲ್ಲಿ ಪೊಲೀಸ್ ಆಯುಕ್ತ ಟಿ. ಸುನೀಲ್ ಕುಮಾರ್, ನಾಲ್ವರು ಹೆಚ್ಚುವರಿ ಪೊಲೀಸ್ ಆಯುಕ್ತರು, ಎಲ್ಲ ಡಿಸಿಪಿಗಳು ಹಾಗು ಎಸಿಪಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
Honourable DCM Sri Parameshwar receiving the keys for the advanced motorcycle for traffic policemen and issue a helmet for a violator @AddlCPTraffic @DCPTrEastBCP pic.twitter.com/btSumCMKfe
— ACPTrafficEast (@ACP_TrafficEast) September 12, 2018