ಭೋಪಾಲ್: ಕಾರು ಚಾಲನೆಯ ವೇಳೆ ಫೋನ್‌ನಲ್ಲಿ ಮಾತನಾಡುತ್ತಿದ್ದುದಕ್ಕೆ ದಂಡ (Fine) ಪಾವತಿಸಲು ಹೇಳಿದ ಟ್ರಾಫಿಕ್ ಪೊಲೀಸ್‌ನನ್ನು (Traffic Police) 4 ಕಿ.ಮೀ ದೂರದವರೆಗೆ ಕಾರಿನ ಬಾನೆಟ್ (Car Bonnet) ಮೇಲೆ ಅಪಾಯಕರ ರೀತಿಯಲ್ಲಿ ವ್ಯಕ್ತಿ ಹೊತ್ತೊಯ್ದ ಘಟನೆ ಮಧ್ಯಪ್ರದೇಶದ (Madhya Pradesh) ಇಂದೋರ್‌ನಲ್ಲಿ (Indore) ಸೋಮವಾರ ನಡೆದಿದೆ.
ಟ್ರಾಫಿಕ್ ಹೆಡ್ ಕಾನ್‌ಸ್ಟೆಬಲ್ ಶಿವಸಿಂಗ್ ಚೌಹಾಣ್‌ನನ್ನು ವ್ಯಕ್ತಿಯೊಬ್ಬ ಅಪಾಯಕರ ರೀತಿಯಲ್ಲಿ ಕಾರಿನ ಬಾನೆಟ್ ಮೇಲೆ ಎಳೆದೊಯ್ದಿದ್ದಾನೆ. ವ್ಯಕ್ತಿ ಕಾರು ಚಾಲನೆ ಮಾಡುತ್ತಿದ್ದ ವೇಳೆ ಫೋನ್‌ನಲ್ಲಿ ಮಾತನಾಡಿದ್ದಕ್ಕೆ ಆತನ ಕಾರನ್ನು ಅಡ್ಡಗಟ್ಟಿದ ಟ್ರಾಫಿಕ್ ಪೊಲೀಸ್ ದಂಡ ಪಾವತಿಸಲು ಹೇಳಿದ್ದಾರೆ. ಆಗ ಕೋಪಗೊಂಡ ಕಾರು ಚಾಲಕ ಪೊಲೀಸ್‌ನನ್ನು ಬಾನೆಟ್ ಮೇಲೆ ಹತ್ತಿಸಿಕೊಂಡೇ 4 ಕಿ.ಮೀ ಎಳೆದೊಯ್ದಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಮಕ್ಕಳಿಗೆ ಪಾಠ ಮಾಡುವ ಶಿಕ್ಷಕನಿಂದ 18 ಕ್ಕೂ ಹೆಚ್ಚು ದೇವಸ್ಥಾನ ದರೋಡೆ
Car loaded with weapons runs over traffic police constable in #MadhyaPradesh‘s #Indore; accused arrested, cop escapes unhurt.#MPPolice #TrafficPolice #ViralVideo pic.twitter.com/MrIiL5CZoZ
— Hate Detector ???? (@HateDetectors) December 12, 2022
ವ್ಯಕ್ತಿ ಅಪಾಯಕರ ರೀತಿಯಲ್ಲಿ ವೇಗವಾಗಿ ಕಾರನ್ನು ಚಲಾಯಿಸುತ್ತಿದ್ದು, ಕಾರನ್ನು ನಿಲ್ಲಿಸಲು ಇತರ ಪೊಲೀಸರು ಸುತ್ತುವರಿಯಬೇಕಾಯಿತು. ಆರೋಪಿ ಚಾಲಕನನ್ನು ಇದೀಗ ಬಂಧಿಸಲಾಗಿದೆ ಎಂದು ಲಸುಡಿಯಾ ಪೊಲೀಸ್ ಠಾಣೆಯ ಸಬ್ ಇನ್‌ಸ್ಪೆಕ್ಟರ್ ಆರ್‌ಎಸ್ ದಂಡೋತಿಯಾ ತಿಳಿಸಿದ್ದಾರೆ. ಇದನ್ನೂ ಓದಿ: 6 ಮದುವೆ, 54 ಮಕ್ಕಳಿಗೆ ತಂದೆಯಾದ ಪಾಕಿಸ್ತಾನಿ ವ್ಯಕ್ತಿ ಸಾವು
ಗ್ವಾಲಿಯರ್ ನಿವಾಸಿಯಾಗಿರುವ ಆರೋಪಿಯ ಬಳಿ ಪಿಸ್ತೂಲ್ ಹಾಗೂ ರಿವಾಲ್ವರ್ ಪತ್ತೆಯಾಗಿದ್ದು, ಅದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಶಸ್ತ್ರಾಸ್ತ್ರಗಳನ್ನು ಹೊಂದಲು ಪರವಾನಗಿ ಪಡೆದಿರುವುದಾಗಿ ಆರೋಪಿ ತಿಳಿಸಿದ್ದಾನೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿರುವುದಾಗಿ ಹೇಳಿದ್ದಾರೆ.