ಹಾವೇರಿ: ಕರ್ತವ್ಯದ ನಡುವೆಯೂ ಟ್ರಾಫಿಕ್ ಪೊಲೀಸ್ ಪೇದೆಯೊರ್ವರು ಗರ್ಭಿಣಿಗೆ ರಕ್ತದಾನ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಆಟೋ ಚಾಲಕ ನಾಗರಾಜ ಅವರ ಸಂಬಂಧಿ ಲಕ್ಷ್ಮಿ ಬರಡಿ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಹೀಗಾಗಿ ಅವರನ್ನು ಹೆರಿಗೆಗೆಂದು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ಹೆರಿಗೆ ವೇಳೆ ಲಕ್ಷ್ಮಿಗೆ ರಕ್ತಸ್ರಾವವಾಗಿ ಬಿ ಪಾಸಿಟಿವ್ ಗುಂಪಿನ ರಕ್ತ ಬೇಕಾಗಿತ್ತು. ಈ ವೇಳೆ ಕರ್ತವ್ಯ ನಿರ್ವಹಿಸುತ್ತಿದ್ದ ಸಂಚಾರಿ ಪೊಲೀಸ್ ಪೇದೆ ಮನೋಜ್ ದೇಸಾಯಿ, ವಿಷಯ ತಿಳಿದು ತಾವೇ ಸ್ವಯಂಪ್ರೇರಿತವಾಗಿ ರಕ್ತದಾನ ಮಾಡಿದರು.
Advertisement
ಹಾವೇರಿ ರಕ್ತಭಂಡಾರ ಸಂಸ್ಥೆ ಲಕ್ಷ್ಮಿಗೆ ಬಿ ಪಾಸಿಟಿವ್ ರಕ್ತ ಒದಗಿಸಿದೆ. ಬಳಿಕ ಸಂಸ್ಥೆಯಲ್ಲಿ ರಕ್ತ ಸ್ಟಾಕ್ ಇಲ್ಲದ ವೇಳೆ ಪೇದೆ ಮನೋಜ್ ರಕ್ತದಾನದ ಮಾಡುವ ಮೂಲಕ ಬಾಣಂತಿ ಜೀವ ಉಳಿಸಿದ್ದಾರೆ. ಇವರ ಈ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ದಾವಣಗೆರೆಯ ಹರಪ್ಪನಹಳ್ಳಿ ಸಿಪಿಐ ಅಪಘಾತವಾಗಿ ರಸ್ತೆಯಲ್ಲಿ ಬಿದ್ದಿದ್ದ ಗಾಯಾಳುಗಳನ್ನು ನೋಡಿ ತಮ್ಮ ವಾಹನದಲ್ಲೇ ಕರೆದುಕೊಂಡು ಹೋಗಿ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದರು.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv