ಬೆಂಗಳೂರು: ಹಿರಿಯ ನಾಗರಿಕರೊಬ್ಬರನ್ನು ಟ್ರಾಫಿಕ್ ಪೊಲೀಸ್ ಪೇದೆಯೊಬ್ಬರು ಎತ್ತಿಕೊಂಡು ಹೋಗುತ್ತಿರುವ ಫೋಟೋವೊಂದು ಸಾಮಾಜಿಕ ತಾಲತಾಣಗಳಲ್ಲಿ ಹರಿದಾಡುತ್ತಿದ್ದು, ವೈರಲ್ ಆಗಿದೆ.
ಅಶೋಕ್ ನಗರ ಟ್ರಾಫಿಕ್ ಪೊಲೀಸ್ ಸ್ಟೇಶನ್ ಪೇದೆ ಬಾಲಾಜಿ ನಾಯಕ್ ಹಿರಿಯ ನಾಗರೀಕರನ್ನು ಇತ್ತಿಕೊಂಡು ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಇವರ ಫೋಟೋ ಈಗ ಎಲ್ಲೆಡೆ ಹರಿದಾಡುತ್ತಿದ್ದು, ಡಿಸಿಪಿ ರವಿ ಡಿ ಚನ್ನಣ್ಣನವರ್, ನಗರ ಪೊಲೀಸ್ ಆಯುಕ್ತ ಟಿ. ಸುನೀಲ್ ಕುಮಾರ್ ಸೇರಿದಂತೆ ಅಪಾರ ಪೊಲೀಸ್ ಅಧಿಕಾರಿಗಳು ಜೊತೆಗೆ ಸಾರ್ವಜನಿಕರು ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ.
ಇತ್ತೀಚೆಗೆ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರು ಮಧ್ಯರಾತ್ರಿ ಸುಮಾರು 12ಗಂಟೆವರೆಗೂ ಜನತಾ ದರ್ಶನವನ್ನು ಮಾಡಿದ್ದರು. ಈ ಸಿಎಂ ಜನತಾ ದರ್ಶನಕ್ಕೆ ಹಿರಿಯ ನಾಗರೀಕರಾದ ಯೂಸುಫ್ ವ್ಯಕ್ತಿ ಆಟೋದಲ್ಲಿ ಒಬ್ಬರೇ ಆಗಮಿಸಿದ್ದರು. ಯೂಸುಫ್ ಅವರಿಗೆ ಎರಡೂ ಕಾಲುಗಳು ಸ್ವಾಧೀನ ಕಳೆದುಕೊಂಡಿದ್ದವು. ಇದರಿಂದ ಅವರಿಗೆ ನಿಲ್ಲಲೂ ಸಾಮರ್ಥ್ಯ ಇರಲಿಲ್ಲ.
@BlrCityPolice ಆರಕ್ಷಕರೆಂದರೆ ಸ್ನೇಹ, ಸಹಕಾರದ……ಸಂಕೇತ???????? https://t.co/wSmwQjq6oS
— Laxman B. Nimbargi, IPS (@DCPWestBCP) September 2, 2018
ಈ ವೇಳೆ ಸೀನಿಯರ್ ಸಿಟಿಜನ್ ಯೂಸುಫ್ ಅವರನ್ನ ಬಾಲಾಜಿ ನಾಯಕ್ ಅವರು ತಮ್ಮ ಕೈಗಳಲ್ಲಿ ಎತ್ತಿಕೊಂಡು ಹೋಗಿ ಸಿಎಂ ಜನತಾ ದರ್ಶನದಲ್ಲಿ ಬಿಟ್ಟಿದ್ದರು. ಹಿರಿಯ ನಾಗರೀಕರನ್ನು ಎತ್ತಿಕೊಂಡಿದ್ದಾಗ ಯಾರೋ ಫೋಟೋ ಕ್ಲಿಕ್ಕಿಸಿಕೊಂಡು ಸಾಮಾಜಿಕ ಜಾಲತಾಣಗಳಿಗೆ ಅಪ್ಲೋಡ್ ಮಾಡಿದ್ದರು. ಈಗ ಈ ಫೋಟೋವನ್ನು ಟ್ಟಿಟ್ಟರಿಗರು ಮೆಚ್ಚಿ ಲೈಕ್ ಮಾಡುತ್ತಿದ್ದಾರೆ.
ಅನಂತ ಸುಬ್ರಮಣ್ಯಂ ಎಂಬವರು ಬಾಲಾಜಿ ನಾಯಕ್ ಅವರು ಯುಸೂಫ್ ಅವರು ಎತ್ತಿಕೊಂಡಿರುವ ಫೋಟೋ ಹಾಕಿ ಟ್ವೀಟ್ ಮಾಡಿದ್ದರು. ಇದಕ್ಕೆ ಡಿಸಿಪಿ ರವಿ ಚನ್ನಣ್ಣನವರು, “ಆರಕ್ಷಕರೆಂದರೆ ಸ್ನೇಹ, ಸಹಕಾರದ ಸಂಕೇತ” ಎಂದು ರೀ ಟ್ವೀಟ್ ಮಾಡುವ ಮೂಲಕ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.
ಬಾಲಾಜಿ ನಾಯಕ್ ಅವರು 12 ವರ್ಷ ಕಾನೂನು ಮತ್ತು ಸುವ್ಯವಸ್ಥೆಯಲ್ಲಿ ಕೆಲಸ ಮಾಡುತ್ತಿದ್ದು, ಕಳೆದ ಐದು ದಿನಗಳಿಂದ ಟ್ರಾಫಿಕ್ ಪೇದೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv