ಬೆಳಗಾವಿ: ಜೀವನದಲ್ಲಿ ಜೀಗುಪ್ಸೆ ಹೊಂದಿ ಕೆರೆಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದ ಮಹಿಳೆಯನ್ನ ಟ್ರಾಫಿಕ್ ಕಾನ್ಸ್‌ಸ್ಟೇಬಲ್ (Traffic Constable) ರಕ್ಷಣೆ ಮಾಡಿರೋ ಘಟನೆ ಬೆಳಗಾವಿಯಲ್ಲಿ (Belagavi) ನಡೆದಿದೆ.
Advertisement
ಬೈಲಹೊಂಗಲ ತಾಲೂಕಿನ ಬೈಲವಾಡ ಗ್ರಾಮದ 44 ವರ್ಷದ ಶಿವಲೀಲಾ ಪರ್ವತಗೌಡ್ರ ಎಂಬವರು ಆತ್ಮಹತ್ಯೆಗೆ ಯತ್ನಿಸಿದ್ದರು. ಸ್ಥಳೀಯರಿಂದ ಉತ್ತರ ಸಂಚಾರ ಠಾಣೆ ಪಿಸಿ ಕಾಶಿನಾಥ್ ಈರಿಗಾರ ಎಂಬವರಿಗೆ ವಿಷಯ ತಿಳೀತ್ತಿದ್ದಂತೆ ಕೆರೆಗೆ ಹಾರಿ ಮಹಿಳೆಯನ್ನು ರಕ್ಷಿಸಿದ್ದಾರೆ. ಇದನ್ನೂ ಓದಿ: ಪತ್ನಿಯ ಕಣ್ಣೆದುರೇ ಗಂಡನ ಕೊಲೆ ಪ್ರಕರಣಕ್ಕೆ ಟ್ವಿಸ್ಟ್- ಐನಾತಿ ಹೆಂಡತಿ ಅರೆಸ್ಟ್
Advertisement
Advertisement
ಲೆಕ್‍ವ್ಯೂ ಆಸ್ಪತ್ರೆ ಪಾಯಿಂಟ್‍ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ವಿಷಯ ತಿಳಿದಿದೆ. ಈ ವೇಳೆ 5 ಅಡಿ ಎತ್ತರದ ಬ್ಯಾರಿಕೇಡ್ ಮೇಲಿಂದ ಜಿಗಿದು ಮಹಿಳೆಯರ ಪ್ರಾಣ ಕಾಪಾಡಿದ್ದಾರೆ. ಈ ಹಿಂದೆ ಮಾರ್ಕೆಟ್ ಠಾಣೆಯ ಪಿಸಿ ಆಗಿದ್ದಾಗಲೂ ಇದೆ ಕೆರೆಗೆ ಹಾರಿದ್ದ ಇಬ್ಬರನ್ನು ರಕ್ಷಿಸಿದ್ದರು. ಇದನ್ನೂ ಓದಿ: 210 ಕೆಜಿ ಭಾರ ಎತ್ತುವಾಗ ಕುತ್ತಿಗೆಗೆ ಬಿದ್ದು ಫಿಟ್‌ನೆಸ್ ಟ್ರೈನರ್ ಸಾವು
Advertisement
ಕಾಶಿನಾಥರ ಕಾರ್ಯಕ್ಕೆ ಬೆಳಗಾವಿ ನಗರ ಪೊಲೀಸ್ ಆಯುಕ್ತ ಸಿದ್ರಾಮಪ್ಪ ಮೆಚ್ಚುಗೆ ವ್ಯಕ್ತಪಡಿಸಿದ್ದು 5 ಸಾವಿರ ನಗದು ಬಹುಮಾನ ಘೋಷಿಸಿದ್ದಾರೆ. ಮುಖ್ಯಮಂತ್ರಿ ಪದಕಕ್ಕೂ ಕಾಶಿನಾಥ ಹೆಸರು ಶಿಫಾರಸು ಮಾಡುವುದಾಗಿ ಕಮೀಷ್ನರ್ ಮಾಹಿತಿ ನೀಡಿದ್ದಾರೆ.
Web Stories