Bengaluru CityDistrictsKarnatakaLatestMain PostMost Shared

ಅಪಘಾತಗಳಿಗೆ ಬ್ರೇಕ್ ಹಾಕಲು ಈ ಟ್ರಾಫಿಕ್ ಪೊಲೀಸ್ ಮಾಡಿದ್ರು ಸೂಪರ್ ಐಡಿಯಾ

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಅಪಘಾತಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿವೆ. ಇದನ್ನ ತಡೆಯಲು ಟ್ರಾಫಿಕ್ ಪೊಲೀಸರು ಶತಾಯ-ಗತಾಯ ಪ್ರಯತ್ನ ಮಾಡಿದ್ರೂ ಕೂಡ ಅಪಘಾತಗಳು ಸಂಭವಿಸ್ತಾನೆ ಇರುತ್ತವೆ. ಅದ್ರೆ ಇಲೋಬ್ಬರು ಟ್ರಾಫಿಕ್ ಸಬ್ ಇನ್ಸ್ ಪೆಕ್ಟರ್ ಅಪಘಾತಗಳನ್ನು ತಡೆಯಲು ಮಾಸ್ಟರ್ ಪ್ಲಾನ್ ಮಾಡಿದ್ದಾರೆ. ಹಾಗೇ ಅದ್ರಲ್ಲಿ ಯಶಸ್ವಿ ಕೂಡ ಆಗಿದ್ದಾರೆ.

ಬೆಂಗಳೂರಿನ ಹೆಚ್‍ಎಸ್‍ಆರ್ ಲೇಔಟ್ ಟ್ರಾಫಿಕ್ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ನಾರಾಯಣಪ್ಪ ಕೈಯಲ್ಲಿ ಲಾಟಿ ಹಿಡಿಯೋ ಬದಲು ಬ್ರಷ್ ಹಿಡಿದುಕೊಂಡು ಚಿತ್ರ ಬಿಡಿಸುತ್ತಿದ್ದಾರೆ. ರಾಜ್ಯದಲ್ಲಿ ಆಗುತ್ತಿರುವ ಅಪಘಾತಗಳನ್ನು ಕಂಡು ಇದಕ್ಕೆ ಎನಾದ್ರೂ ಪರಿಹಾರ ಕಂಡು ಹಿಡಿಯಬೇಕು ಅಂತಾ ನಾರಾಯಣಪ್ಪ ಯೋಚಿಸುತ್ತಿದ್ರು. ಆ ಸಂದರ್ಭದಲ್ಲಿ ಇವರಿಗೆ ತಕ್ಷಣ ನೆನೆಪಿಗೆ ಬಂದಿದ್ದು ಅಂಜನೇಯ.

ಬೆಂಗಳೂರಿನ ಹಲವು ಕಡೆ ಹೆಚ್ಚು ಅಪಘಾತ ಅಗೋ ವಲಯಗಳಲ್ಲಿ ದೇವರ ಚಿತ್ರ ಬಿಡಿಸ್ತಾರೆ. ಯಾಕೆ ಅಂದ್ರೆ ಇತಂಹ ಅಪಘಾತ ವಲಯದಲ್ಲಿ ದೇವರ ಚಿತ್ರ ಬಿಡಿಸಿದ್ರೆ ಆಕ್ಸಿಡೆಂಟ್ ಕಡಿಮೆ ಅಗತ್ತದೆ ಎಂಬ ನಂಬಿಕೆ ಇವರದ್ದು. ಪ್ರಮುಖವಾಗಿ ಇವರು ಹೆಚ್ಚು ತಿರುವುಗಳಿರೋ ಕಡೆ ಹಾಗೂ ಅಪಘಾತ ವಲಯದಲ್ಲಿ ಹನುಮಂತನ ಚಿತ್ರವನ್ನು ಬಿಡಿಸುತ್ತಾರೆ. ದೇವರ ಚಿತ್ರಗಳನ್ನು ನೋಡಿದಾಗ ಸವಾರರು ತಮ್ಮ ವೇಗದ ಮಿತಿಯನ್ನು ಕಡಿಮೆ ಮಾಡಿಕೂಂಡು ದೇವರಿಗೆ ನಮಸ್ಕಾರ ಮಾಡ್ತಾರೆ. ಆದ್ದರಿಂದ ಅಪಘಾತಗಳು ಕಡಿಮೆ ಅಗುತ್ತವೆ ಅನ್ನೋದು ಇವರ ಲಾಜಿಕ್.

ಕಳೆದ 13 ವರ್ಷಗಳಿಂದ ಸುಮಾರು 70 ಕ್ಕೂ ಹೆಚ್ಚು ಅಫಘಾತವಲಯದಲ್ಲಿ ದೇವರ ಚಿತ್ರ ಬರೆದಿದ್ದಾರೆ. ಇವರ ಕೈಯಲ್ಲಿ ಯಾವಾಗಲೂ ಒಂದು ಬ್ಯಾಗ್ ಇರತ್ತೆ. ಬ್ಯಾಗ್‍ನಲ್ಲಿ ಪೇಂಟ್ ಹಾಗೂ ಬ್ರಷ್‍ಗಳು ಇದ್ದೇ ಇರುತ್ತವೆ. ಜನರು ಇಲ್ಲಿ ಅಪಘಾತಗಳು ಹೆಚ್ಚು ಅಗ್ತಾವೆ ಅಂದ್ರೆ ಸಾಕು ಅಲ್ಲಿ ಹನುಮಂತನ ಚಿತ್ರವನ್ನು ಬಿಡಿಸ್ತಾರೆ. ಕುತೂಹಲದ ಸಂಗತಿ ಅಂದ್ರೆ ಇವರು ದೇವರ ಚಿತ್ರ ಬರೆದ ಹಲವು ಕಡೆ ಈಗ ಅಪಘಾತಗಳೇ ಅಗತ್ತಿಲ್ಲವಂತೆ. ಹಾಗೇ ಇವರು ಚಿತ್ರ ಬರೆದ ಹಲವು ಕಡೆ ದೇವಸ್ಥಾನಗಳಾಗಿವೆಯಂತೆ. ಇವರ ಈ ಕೆಲಸಕ್ಕೆ ಸಹೋದ್ಯೋಗಿಗಳು ಕೂಡ ಸಂತಸ ವ್ಯಕ್ತಪಡಿಸುತ್ತಾರೆ.

ಒಟ್ಟಿನಲ್ಲಿ ಪೊಲೀಸರೆಂದ್ರೆ ಅವರ ಬಗ್ಗೆ ಆರೋಪಗಳೇ ಹೆಚ್ಚು. ಆದ್ರೆ ಇವರು ಮಾಡುತ್ತಿರುವ ಕೆಲಸ ಮಾತ್ರ ನಿಜಕ್ಕೂ ಮೆಚ್ಚಲೇ ಬೇಕಾದ್ದು. ತಮ್ಮಗೆ ಗೊತ್ತಿರೂ ಕಲೆಯಲ್ಲಿಯೇ ಸಮಾಜಿಕ ಕಾರ್ಯವನ್ನು ಮಾಡುತ್ತಿರುವುದು ಇತರರಿಗೂ ಮಾದರಿ.

Leave a Reply

Your email address will not be published. Required fields are marked *

Back to top button