ಬೆಂಗಳೂರು: ಬೈಕ್ ಮಾಲೀಕನ ಮೇಲೆ ಟ್ರಾಫಿಕ್ ಎಎಸ್‍ಐ ಹಲ್ಲೆ ಮಾಡಿರೋ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಉಮಾಪತಿ ಹಲ್ಲೆಗೊಳಗಾದ ಬೈಕ್ ಮಾಲೀಕ. ಬೆಂಗಳೂರಿನ ಚಾಮರಾಜಪೇಟೆ ಸಾಯಿ ಕೆಫೆ ಹೊಟೇಲ್ ಬಳಿ ಈ ಘಟನೆ ನಡೆದಿದೆ. ನೋ ಪಾರ್ಕಿಂಗ್ ನಲ್ಲಿ ಬೈಕ್ ನಿಲ್ಲಿಸಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಗಲಾಟೆ ನಡೆದಿದ್ದು, ಉಮಾಪತಿ ಮೇಲೆ ಚಾಮರಾಜಪೇಟೆ ಟ್ರಾಫಿಕ್ ಎಎಸ್‍ಐ ಹನುಮಂತರಾಯಪ್ಪ ಹಲ್ಲೆ ಮಾಡಿದ್ದಾರೆ. ಪ್ರತ್ಯಕ್ಷದರ್ಶಿಗಳು ಇದನ್ನ ಮೊಬೈಲ್‍ನಲ್ಲಿ ಚಿತ್ರೀಕರಿಸಿದ್ದಾರೆ. ಹಲ್ಲೆಯ ದೃಶ್ಯಾವಳಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
Advertisement
ಘಟನೆಗೆ ಸಂಬಂಧಿಸಿದಂತೆ ಚಾಮರಾಜಪೇಟೆ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement
https://www.youtube.com/watch?v=7AXRS1wEZos&feature=youtu.be