ಬೆಂಗಳೂರು: ಸಿಲಿಕಾನ್ ಸಿಟಿ ಸಂಚಾರಿ ಪೊಲೀಸರು ಬೆಳ್ಳಂಬೆಳ್ಳಗ್ಗೆ ವಿದ್ಯಾರ್ಥಿಗಳು ಹಾಗೂ ಮ್ಯಾಜಿಕ್ ಮ್ಯಾನ್‍ಗಳ ಜೊತೆ ರಸ್ತೆಗಿಳಿದ್ರು. ದಿನವಿಡೀ ಹೆಲ್ಮೆಟ್ ಹಾಗೂ ಸೀಟ್ ಬೆಲ್ಟ್ ಧರಿಸದವರನ್ನು ಅಡ್ಡಗಟ್ಟಿ ಕ್ರಮಗೈಗೊಳ್ಳುತ್ತಿದ್ದ ಟ್ರಾಫಿಕ್ ಪೊಲೀಸರು ಸಂಚಾರ ದಟ್ಟಣೆ ಕಡಿಮೆ ಮಾಡುವುದರ ವಿಭಿನ್ನವಾಗಿ ವಾಹನ ಸವಾರರ ಮನಗೆಲ್ಲುವ ಪ್ರಯತ್ನ ಮಾಡಿದರು.
ನಗರದ ಹೆಬ್ಬಾಳ ಹಾಗೂ ಆರ್.ಟಿ ನಗರ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಹನ ಸವಾರರು ಸಂಚಾರಿ ರೂಲ್ಸ್ ಸರಿಯಾಗಿ ಪಾಲಿಸುದಿಲ್ಲ. ಯುವಕರು ರಸ್ತೆಯಲ್ಲಿ ವಿಲೀಂಗ್ ಮಾಡುವುದರಿಂದ ಸಾವು ನೋವುಗಳು ಹೆಚ್ಚಾಗುತ್ತಿದೆ. ಆ ಕಾರಣಕ್ಕೆ ಸಂಚಾರಿ ಪೊಲೀಸರು ಇಂದು ಮ್ಯಾಜಿಕ್ ಹಾಗೂ ವಿದ್ಯಾರ್ಥಿಗಳ ಮೂಲಕ ಜಾಥಾ ಮಾಡಿಸಿ ಜಾಗೃತಿ ಮೂಡಿಸುವ ಕೆಲಸ ಮಾಡಿದರು.
Advertisement
ಸಂಚಾರ ನಿರ್ವಾಹಣೆ ಮತ್ತು ರಸ್ತೆ ಸುರಕ್ಷತಾ ತಿಂಗಳಾಗಿರುವುದರಿಂದ ಸಂಚಾರಿ ಪೊಲೀಸರು ವಾಹನ ಸವಾರರಲ್ಲಿ ಅರಿವು ಮೂಡಿಸುವ ಕೆಲಸವನ್ನು ಸಂಚಾರಿ ಪೊಲೀಸರು ಮಾಡಿದರು. ಸಂಚಾರಿ ನಿಯಮಗಳನ್ನು ಸರಿಯಾಗಿ ಪಾಲಿಸುವುದರಿಂದ ಆಗುವ ಅನಾಹುತಗಳನ್ನು ತಪ್ಪಿಸಲು ಸಾಧ್ಯ ಎಂಬುದರ ಬಗ್ಗೆ ವಿದ್ಯಾರ್ಥಿಗಳಿಂದ ಜಾತಾ ಮಾಡಿಸುವುದರ ಮೂಲಕ ವಾಹನ ಸವಾರರ ಮನಗೆಲ್ಲುವ ಪ್ರಯತ್ನವನ್ನು ಮಾಡಿದರು.