ಬೆಂಗಳೂರು: ಆಂಧ್ರ ಪ್ರದೇಶ ಹಾಗೂ ತೆಲಂಗಾಣ ಲೋಕಸಭಾ-ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತ ಹಾಕಲು ಮತದಾರರು ಆಂಧ್ರ ಹಾಗೂ ತೆಲಂಗಾಣಕ್ಕೆ ಹೊರಟ ಮತದಾರರಿಗೆ ಟ್ರಾಫಿಕ್ ಬಿಸಿ ತಟ್ಟಿದೆ.
ಬರೋಬ್ಬರಿ 3-4 ಕಿ.ಮೀ ಗಟ್ಟಲೇ ಟ್ರಾಫಿಕ್ ಜಾಮ್ ಆಗಿದೆ. ಬೆನ್ನಿಗಾನ ಹಳ್ಳಿಯಿಂದ ಕೆಆರ್ ಪುರಂವರೆಗೆ, ಬಾಣಸವಾಡಿಯಿಂದ ಟಿನ್ ಫ್ಯಾಕ್ಟರಿವರೆಗೆ ಟ್ರಾಫಿಕ್ ಜಾಮ್ ಆಗಿತ್ತು. ಬಸ್ ಇಲ್ಲದೆ ಪ್ರಯಾಣಿಕರು ಹಾಗೂ ಮತದಾರರು ಪರದಾಟ ನಡೆಸಿದರು.
ಖಾಸಗಿ ಬಸ್‍ನಲ್ಲಿ ದುಪ್ಪಟ್ಟು ದರ ಹಿನ್ನೆಲೆಯಲ್ಲಿ ಪ್ರಯಾಣಿಕರು ಪ್ರಯಾಣಿಸಲು ಹಿಂದೇಟು ಹಾಕುತ್ತಿದ್ದಾರೆ. ಬಸ್ ಇಲ್ಲದೆ ಪ್ರಯಾಣಿಕರು ರಾತ್ರಿ 8 ಗಂಟೆಯಿಂದ ತಡರಾತ್ರಿ 3 ಗಂಟೆವರೆಗೆ ಬಸ್ ನಿಲ್ದಾಣದಲ್ಲಿಯೇ ಕಾದು ಸುಸ್ತಾಗಿದ್ದಾರೆ. ತೆಲಂಗಾಣ ಹಾಗೂ ಆಂಧ್ರ ಪ್ರದೇಶ ಚುನಾವಣೆ ಹಿನ್ನೆಲೆಯಲ್ಲಿ ಜನರು ಬಸ್‍ಗಳು ಇಲ್ಲದೆ ಬೆಳಗ್ಗೆಯಿಂದ ಪರದಾಡುತ್ತಿದ್ದಾರೆ.
ಬಸ್‍ಗಳಿಲ್ಲದೆ ಆಂಧ್ರ ಪ್ರದೇಶದ ಹಾಗು ತೆಲಂಗಾಣ ಜನರು ಲಾರಿಯಲ್ಲಿ ಸಹ ಹೊರಟಿದ್ದಾರೆ. ಬುಧವಾರ ಸಂಜೆ ಸುಮಾರು 5.00 ಗಂಟೆಯಿಂದ ರಾತ್ರಿ 12.00 ಗಂಟೆಯವರೆಗೂ ಕೂಡ ಟಿನ್ ಫ್ಯಾಕ್ಟರಿ, ಬೆಂಡಿಗನಹಳ್ಳಿ, ಕೆಆರ್ ಪುರಂ, ಭಾಗದಲ್ಲಿ ಸುಮಾರು 6 ಗಂಟೆ ಹಾಗೂ ಹೆಚ್ಚು ಟ್ರಾಫಿಕ್ ಜಾಮ್ ಆಗಿತ್ತು.
ಇಂದು ಮುಂಜಾನೆ ಸುಮಾರು 5 ಗಂಟೆಯಿಂದಲೇ ಜನರು ಮತ ಚಲಾವಣೆ ಮಾಡಲು ಆಂಧ್ರಪ್ರದೇಶ ತಮ್ಮ ಊರಿನ ಕಡೆಗೆ ತೆರಳುತ್ತಿದ್ದಾರೆ.