ನೆಲಮಂಗಲ: ಸಾಲು ಸಾಲು ರಜೆ (Holiday) ಹಿನ್ನೆಲೆ ಬೆಂಗಳೂರು ಹೊರವಲಯ ನೆಲಮಂಗಲ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ (Nelamangala National Highway) ಭಾರೀ ಟ್ರಾಫಿಕ್ ಜಾಮ್ ಉಂಟಾಗಿದೆ. ವಾಹನ ಸವಾರರು ಗಂಟೆಗಂಟಲ್ಲೆ ಬಿಸಿಲಿನಲ್ಲಿ ಬಸವಳಿದು ಸಾಗುತ್ತಿದ್ದಾರೆ.
22 ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ನೆಲಮಂಗಲ ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಾಫಿಕ್ ದಟ್ಟಣೆ ಹೆಚ್ಚಾಗಿದೆ. ಜೊತೆಗೆ ಇಂದು ಶನಿವಾರ ವೀಕೆಂಡ್, ನಾಳೆ ಭಾನುವಾರ ರಜೆ, ಸೋಮವಾರ ಗಣರಾಜ್ಯೋತ್ಸವ ರಜೆ ಹೀಗಾಗಿ ಜನ ತಮ್ಮ ತಮ್ಮ ಊರುಗಳತ್ತ ತೆರಳುತ್ತಿದ್ದಾರೆ. ಇದನ್ನೂ ಓದಿ: ಪಾರ್ಕಿಂಗ್ ವಿಚಾರಕ್ಕೆ ಯಲಹಂಕ ʻಕೈʼ ಮುಖಂಡನ ಅಳಿಯ & ಸ್ಥಳೀಯರ ನಡುವೆ ಕಿರಿಕ್
ಇನ್ನೂ ಕೆಲವರು ಪ್ರವಾಸಿ ತಾಣಗಳತ್ತ ಮುಖ ಮಾಡಿದ್ದಾರೆ. ಹೀಗಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ. ನೆಲಮಂಗಲ ಕುಣಿಗಲ್ ಬೈಪಾಸ್ ಬಳಿ ಕಿಲೋಮೀಟರ್ ಗಟ್ಟಲೇ ಟ್ರಾಫಿಕ್ ಜಾಮ್ ಆಗಿದೆ. ಇತ್ತ ಸಮರ್ಪಕ ಸಾರಿಗೆ ವ್ಯವಸ್ಥೆ ಇಲ್ಲದೇ ಜನರ ಪರದಾಟವೂ ಆಗುತ್ತಿದೆ. ಇದನ್ನೂ ಓದಿ: ನಾಯಿಯಿಂದ ಚಿರತೆ ಬಾಯಿಗೆ ಜನ – ಬೀದಿನಾಯಿ ಪುನರ್ವಸತಿ ಕೇಂದ್ರ ಸ್ಥಾಪನೆಗೆ ಗ್ರಾಮಸ್ಥರ ವಿರೋಧ


