ಬೆಂಗಳೂರು: ನಗರದ ಹೊಸೂರು ಮುಖ್ಯರಸ್ತೆಯ ಎಲಿವೆಟೆಡ್ ಫ್ಲೈಓವರ್ ದುರಸ್ತಿ ಮಾಡುವ ಕಾರಣ ಸೋಮವಾರ ಮಧ್ಯರಾತ್ರಿಯಿಂದ ಭಾರೀ ವಾಹನ, ಲಾರಿ, ಬಸ್‍ಗಳ ಸಂಚಾರಕ್ಕೆ ನಿಷೇಧ ಹೇರಿದ್ದು, ಇದರಿಂದಾಗಿ ಹೊಸೂರು ಮುಖ್ಯರಸ್ತೆಯಲ್ಲಿ ಟ್ರಾಫಿಕ್ ಹೆಚ್ಚಾಗಿದೆ.
ಹೊಸೂರು ಮುಖ್ಯ ರಸ್ತೆಯಿಂದ ಎಲೆಕ್ಟ್ರಾನಿಕ್ ಸಿಟಿವರೆಗೆ ಸಂಚಾರ ದಟ್ಟಣೆ ತಗ್ಗಿಸುವ ಸಲುವಾಗಿ 8 ವರ್ಷಗಳ ಹಿಂದೆ ಸುಮಾರು 9 ಕಿಲೋಮೀಟರ್ ಉದ್ದದ ಸಿಗ್ನಲ್ ರಹಿತ ಎಲಿವೆಟೆಡ್ ಫ್ಲೈ ಓವರ್ ನಿರ್ಮಿಸಲಾಗಿತ್ತು. ಇದರಿಂದಾಗಿ ಎಲೆಕ್ಟ್ರಾನಿಕ್ ಸಿಟಿಯಲ್ಲಿನ ಐಟಿ, ಬಿಟಿ ಕಂಪನಿಯಲ್ಲಿ ಕೆಲಸ ಮಾಡುವವರಿಗೆ ಹಾಗೂ ಸಾರ್ವಜನಿಕರಿಗೆ ಅನುಕೂಲವಾಗಿತ್ತು.
Advertisement
Advertisement
ಐಟಿ ಕಂಪನಿಗಳು ಬಿಎಂಟಿಸಿಯಿಂದ ಗುತ್ತಿಗೆ ಆಧಾರದಲ್ಲಿ ಬಸ್ ಗಳನ್ನು ಪಡೆದು ಉದ್ಯೋಗಿಗಳಿಗೆ ಸಾರಿಗೆ ವ್ಯವಸ್ಥೆ ಮಾಡಿತ್ತು. ಇದೀಗ ನಿರ್ವಹಣೆಯ ಹಿನ್ನೆಲೆ ಬೆಂಗಳೂರು ಎಲಿವೇಟೆಡ್ ಟೋಲ್ ವೇ ಲಿಮಿಟೆಡ್(ಬಿಇಟಿಎಲ್)ಭಾರೀ ವಾಹನಗಳಿಗೆ ಸುಮಾರು 2 ತಿಂಗಳ ಕಾಲ ನಿರ್ಬಂಧ ವಿಧಿಸಿರುವ ಹಿನ್ನೆಲೆ ಇದರ ಬಿಸಿ ಟೆಕ್ಕಿಗಳಿಗೆ ತಟ್ಟಿದ್ದು, ದುರಸ್ತಿ ಕಾರ್ಯ ಮುಗಿಯುವವರೆಗೂ ತಮ್ಮ ದ್ವಿಚಕ್ರ ವಾಹನ, ಕಾರ್ ಗಳಲ್ಲಿ ಸಂಚರಿಸಲು ಮುಂದಾಗಿದ್ದಾರೆ.
Advertisement
ತಮಿಳುನಾಡಿನಿಂದ ಬೆಂಗಳೂರಿಗೆ ಬರುವ ಸಾರಿಗೆ ಬಸ್‍ಗಳು ಕೂಡ ನಿರ್ಬಂಧದ ಬಿಸಿ ತಟ್ಟಿದ್ದು, ಇದರಿಂದಾಗಿ ಸಿಲ್ಕ್ ಬೋರ್ಡ್‍ನಿಂದ ಎಲೆಕ್ಟ್ರಾನಿಕ್ ಸಿಟಿವರಗೆ ಇಂದಿನಿಂದ ಹೆಚ್ಚಿನ ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆಯಿದೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com