ಮೈಸೂರು: ಸಾಲು ಸಾಲು ರಜೆ ಹಿನ್ನೆಲೆಯಲ್ಲಿ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ (Bengaluru-Mysuru Expressway) ಸಂಚಾರ ದಟ್ಟಣೆ ಉಂಟಾಗಿ, ವಾಹನ ಸವಾರರು ಪರದಾಡಿದ ಘಟನೆ ನಡೆದಿದೆ.
ಬೆಂಗಳೂರು ಕಡೆಯಿಂದ ಶನಿವಾರ ಸಾವಿರಾರು ವಾಹನಗಳು ಮೈಸೂರು ಕಡೆಗೆ ಪ್ರಯಾಣಿಸಿದವು. ಇದರಿಂದಾಗಿ ಮೈಸೂರು ಎಕ್ಸ್‌ಪ್ರೆಸ್ ಹೈವೇಯಲ್ಲಿ ಟ್ರಾಫಿಕ್ ಜಾಮ್ ಉಂಟಾಯಿತು. ಟೋಲ್ ಬಳಿ ಸುಮಾರು 3 ಕಿ.ಮೀ.ನಷ್ಟು ಟ್ರಾಫಿಕ್ ಜಾಮ್ ಆಯಿತು. ಇದನ್ನೂ ಓದಿ: ಹಿಜಬ್ ವಿಚಾರ ಸುಪ್ರೀಂ ಕೋರ್ಟ್‍ನಲ್ಲಿರುವಾಗ ಅನುಮತಿ ಕೊಡೋದು ಎಷ್ಟು ಸರಿ?: ರವಿಕುಮಾರ್
ಸುಮಾರು 2 ಗಂಟೆಗಳ ವರೆಗೆ ವಾಹನ ಸವಾರರು ಸಂಚಾರ ದಟ್ಟಣೆಯಲ್ಲಿ ಸಿಲುಕಿ ಪರದಾಡಿದರು. ರಸ್ತೆಯುದ್ದಕ್ಕೂ ವಾಹನಗಳು ಕಿಕ್ಕಿರಿದು ನಿಂತಿದ್ದ ದೃಶ್ಯದ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ನೆಲಮಂಗಲ ಹೈವೇನಲ್ಲೂ ಕಿಲೋಮೀಟರ್‌ಗಟ್ಟಲೇ ಟ್ರಾಫಿಕ್ ಜಾಮ್ ಉಂಟಾಗಿತ್ತು.
ಶನಿವಾರ ಮತ್ತು ಭಾನುವಾರ ರಜೆ. ಜೊತೆಗೆ ಕ್ರಿಸ್‌ಮಸ್ ಪ್ರಯುಕ್ತ ಸೋಮವಾರ ಕೂಡ ರಜೆ ಇದೆ. ಮೂರು ದಿನಗಳ ರಜೆ ಹಿನ್ನೆಲೆಯಲ್ಲಿ ಜನರು ಊರುಗಳತ್ತ ಮುಖ ಮಾಡಿದ್ದಾರೆ. ಬಸ್ ನಿಲ್ದಾಣಗಳಲ್ಲೂ ಅಪಾರ ಸಂಖ್ಯೆಯಲ್ಲಿ ಪ್ರಯಾಣಿಕರು ನೆರೆದಿದ್ದಾರೆ. ಬಸ್‌ಗಳು ಸಹ ರಶ್ ಆಗುತ್ತಿವೆ. ಇದನ್ನೂ ಓದಿ: ಹಿಂದೂ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ತರಗತಿಗೆ ಹೋಗುವಂತೆ ನಾನು ಕರೆ ಕೊಡುತ್ತೇನೆ: ಯತ್ನಾಳ್