ಬೆಂಗಳೂರು: ರಾಜ್ಯದಲ್ಲಿ 50% ಟ್ರಾಫಿಕ್ ಡಿಸ್ಕೌಂಟ್ (Traffic Discount) ಗೆ ವ್ಯಾಪಕ ಬೆಂಬಲ ಸಿಕ್ಕಿದೆ. ಈ ಆಫರ್ ಮಸ್ತ್ ಆಗಿ ಯೂಸ್ ಮಾಡಿಕೊಂಡ ಸಾರ್ವಜನಿಕರು ಕೋಟಿ ಕೋಟಿ ದಂಡವನ್ನು ಕಟ್ಟಿ ತಮ್ಮ ಕೇಸ್ಗಳನ್ನು ಕ್ಲಿಯರ್ ಮಾಡಿಕೊಳ್ತಾ ಇದ್ದಾರೆ.
Advertisement
ಸಂಚಾರಿ ಪೊಲೀಸರ ಖಜಾನೆಗೆ ಬಂದು ಬಿಳುತ್ತಿದೆ ಕೋಟಿ ಕೋಟಿ ದಂಡದ ಹಣ. 6 ದಿನದಲ್ಲಿ 51 ಕೋಟಿ ದಂಡ ವಸೂಲಿ (Fine Collection) ಮಾಡಿದ್ದಾರೆ. ಬೆಂಗಳೂರಿನಲ್ಲಿ ವಾಹನ ಸವಾರರು ಟ್ರಾಫಿಕ್ ವೈಲೇಷನ್ (Traffic Violation) ಮಾಡಿದ ಕಾರಣ, ಸಾವಿರಾರು ರೂಪಾಯಿ ದಂಡದ ಮೊತ್ತ ಬ್ಯಾಲೆನ್ಸ್ ಇಟ್ಟುಕೊಂಡಿದ್ದರು. ಇದನ್ನೂ ಓದಿ: ಶೇ.50 ಫೈನ್ ಡಿಸ್ಕೌಂಟ್ಗೆ ಫುಲ್ ರೆಸ್ಪಾನ್ಸ್ – 5 ದಿನದಲ್ಲಿ 50 ಕೋಟಿ ರೂ. ದಂಡ ವಸೂಲಿ
Advertisement
Advertisement
ದಂಡ ವಸೂಲಿಗೆ ರಿಯಾಯಿತಿ ಬೆನ್ನಲ್ಲೇ ವಾಹನ ಸವಾರರು ಕಳೆದ 6 ದಿನದಿಂದ ನಿರಂತರವಾಗಿ ಸರತಿ ಸಾಲಿನಲ್ಲಿ ನಿಂತು ದಂಡ ಕಟ್ಟುತ್ತಿದ್ದಾರೆ. ಆರು ದಿನದಲ್ಲಿ ಬರೋಬ್ಬರಿ 51 ಕೋಟಿ 85 ಲಕ್ಷ ದಂಡದ ಮೊತ್ತ ಸಂಗ್ರಹವಾಗಿದೆ. ಮುಂದಿನ ಫೆಬ್ರವರಿ 11ರವರೆಗೂ ರಿಯಾಯಿತಿ ಅವಧಿ ಇದ್ದು, ಮುಂದಿನ ಮೂರು ದಿನದಲ್ಲಿ 70 ಕೋಟಿಗೂ ಅಧಿಕ ಮೊತ್ತ ರೀಚ್ ಆಗುವ ನಿರೀಕ್ಷೆ ಇದೆ.
Advertisement
ದಂಡ ಪಾವತಿಗೆ ದಿನಾಂಕ ವಿಸ್ತರಣೆ ಮಾಡುವಂತೆ ಒತ್ತಾಯವೂ ಕೇಳಿ ಬರುತ್ತಿದೆ. ಸಧ್ಯ ಅವಧಿ ವಿಸ್ತರಣೆ ಬಗ್ಗೆ ಯಾವುದೇ ನಿರ್ಧಾರ ಇಲ್ಲ ಅಂತ ಸಂಚಾರಿ ಪೊಲೀಸ್ ಆಯುಕ್ತ ಸಲೀಂ ಹೇಳಿದ್ದಾರೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k