ಬೆಂಗಳೂರು: ಸಂಚಾರ ನಿಯಮ (Traffic Fine) ಉಲ್ಲಂಘನೆ ಪ್ರಕರಣಗಳಿಗೆ ಸಂಬಂಧಿಸಿದಂತೆ ದಂಡ ಪಾವತಿ ಮೇಲೆ ಘೋಷಿಸಿದ್ದ ಶೇ.50 ರಿಯಾಯಿತಿ ಸೌಲಭ್ಯದ ಅವಧಿಯನ್ನು ಮತ್ತೆ ವಿಸ್ತರಿಸಲಾಗಿದೆ.
ಕರ್ನಾಟಕ ರಾಜ್ಯ ಸೇವಾ ಪ್ರಾಧಿಕಾರದ ಅಧ್ಯಕ್ಷ ವೀರಪ್ಪ ನೇತೃತ್ವದಲ್ಲಿ ಕಳೆದ ತಿಂಗಳು 14 ರಂದು ಸಭೆ ನಡೆಸಲಾಗಿತ್ತು. ಸಭೆಯಲ್ಲಿ ಮತ್ತೆ ಶೇ.50 ರಿಯಾಯಿತಿ ಸೌಲಭ್ಯದ ಅವಧಿ ವಿಸ್ತರಿಸುವ ಸಂಬಂಧ ತೀರ್ಮಾನ ಕೈಗೊಳ್ಳಲಾಗಿತ್ತು. ಅದರಂತೆ ಮಾ.4ರಿಂದ 15 ದಿನಗಳ ಕಾಲ ರಿಯಾಯಿತಿಯಾಗಿ ದಂಡ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ. ಇದನ್ನೂ ಓದಿ: ಮರಿಯಪ್ಪನ ಪಾಳ್ಯದಲ್ಲಿ ಸಿಲಿಂಡರ್ ದುರಂತ- 13 ಜನರಿಗೆ ಗಾಯ
Advertisement
Advertisement
ರಿಯಾಯಿತಿ ಸೌಲಭ್ಯದಿಂದಾಗಿ ದಂಡ ಪಾವತಿಸುವವರ ಸಂಖ್ಯೆ ಹೆಚ್ಚಾಗಿದೆ. ಜನರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹೀಗಾಗಿ ರಿಯಾಯಿತಿ ಸೌಲಭ್ಯದ ದಿನಾಂಕ ವಿಸ್ತರಣೆ ಮಾಡಲು ಪರಿಶೀಲಿಸಿ ಎಂದು ಸಂಚಾರ ಪೊಲೀಸರು, ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಕೋರಿಕೆ ಸಲ್ಲಿಸಿದ್ದರು.
Advertisement
Advertisement
ಕೋರಿಕೆ ಮೇರೆಗೆ ಸಭೆ ನಡೆಸಿ, ಶೇ.50 ರಿಯಾಯಿತಿ ಸೌಲಭ್ಯದ ಅವಧಿ ವಿಸ್ತರಿಸಿ ಆದೇಶ ಹೊರಡಿಸಲಾಗಿದೆ. ಈಗಾಗಲೇ ಕೋಟ್ಯಂತರ ರೂ. ದಂಡ ಸಂಗ್ರಹವಾಗಿದ್ದು, ಅವಧಿ ವಿಸ್ತರಣೆಯಿಂದ ಇನ್ನೂ ಹೆಚ್ಚಿನ ದಂಡ ಸಂಗ್ರಹವಾಗುವ ನಿರೀಕ್ಷೆ ಇದೆ. ಇದನ್ನೂ ಓದಿ: ನನಗೆ ಕಾಂಗ್ರೆಸ್ ಪಕ್ಷದಿಂದ ಯಾವುದೇ ಆಫರ್ ಬರಲಿಲ್ಲ: ಸೋಮಶೇಖರ್ ಸ್ಪಷ್ಟನೆ