ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ಟ್ರಾಫಿಕ್ ಸಿಟಿಯಾಗುತ್ತಿರುವ ಬಗ್ಗೆ ಖುದ್ದು ಸಿಎಂ ಬೊಮ್ಮಾಯಿ ಗರಂ ಆಗಿದ್ದರು. ಸಿಎಂ ಸಿಟ್ಟಿಗೆದ್ದಿದ್ದರಿಂದ ಅಧಿಕಾರಿಗಳು ಕೂಡ ಫೀಲ್ಡ್‍ಗಿಳಿದ್ರು. ಈ ಬೆನ್ನಲ್ಲೇ ನಗರದ ಟ್ರಾಫಿಕ್ ಜಂಕ್ಷನ್‍ಗಳ ಕ್ಲಿಯರ್ ಮಾಡಲು ಟ್ರಾಫಿಕ್ ಡೈವರ್ಟ್ ಮಾಡಲಾಯ್ತು. ಇದೀಗ ಮಿಶ್ರ ಅಭಿಪ್ರಾಯ ವ್ಯಕ್ತವಾಗುತ್ತಿದೆ.
Advertisement
ಹೆಬ್ಬಾಳ, ಗೊರಗುಂಟೆಪಾಳ್ಯ, ಕೆಆರ್ ಪುರಂ, ಸಿಲ್ಕ್ ಬೋರ್ಡ್ ಎಲ್ಲ ಟ್ರಾಫಿಕ್ ಜಾಮ್‍ಗಳಲ್ಲಿ ರೋಡ್ ಡೈವರ್ಟ್ ಮಾಡಿ ಓನ್ ವೇ ಹಾಗೂ ವೆಹಿಕಲ್ ಪಾರ್ಕಿಂಗ್ ಕ್ಲಿಯರ್ ಮಾಡೋದು ಹೀಗೆ ಹಲವು ಬದಲಾವಣೆಗಳನ್ನ ತರಲಾಗಿದೆ. ಇದೆಲ್ಲ ವರ್ಕ್ ಆಗ್ತಿಲ್ಲ ಅಂತಾ ವಾಹನ ಸವಾರರು ಆಕ್ರೋಶ ಹಾಕುತ್ತಿದ್ದಾರೆ. ಇದನ್ನೂ ಓದಿ: ಝೀರೋ ಟ್ರಾಫಿಕ್‍ನಲ್ಲಿ ರಸ್ತೆ ದಾಟಿದ ಹುಲಿರಾಯನ ವೀಡಿಯೋ ವೈರಲ್
Advertisement
Advertisement
ರತ್ನಾಕರ್ ರೆಡ್ಡಿ ಎಂಬ ಕನ್ಸಲ್‍ಟೆಂಟ್ ನೇಮಕ ಮಾಡಿದ್ದು ವೈಜ್ಞಾನಿಕವಾಗಿ ಟ್ರಾಫಿಕ್ ಹೆಚ್ಚಾಗಿದ್ಯಾ..? ಕಾರಣಗಳೇನು ? ಎಂಬ ಬಗ್ಗೆ 3 ದಿನದಲ್ಲಿ ಸಮನ್ವಯ ಸಮಿತಿ ಮುಂದೆ ರಿಪೋರ್ಟ್ ಇಡಲಿದ್ದಾರೆ. ಒಟ್ಟಿನಲ್ಲಿ ಟ್ರಾಫಿಕ್ ಕ್ಲಿಯರೆನ್ಸ್ ಐಡಿಯಾ ವರನಾ – ಶಾಪನಾ ಎಂಬ ಬಗ್ಗೆ ಶೀಘ್ರವೇ ಸ್ಪಷ್ಟತೆ ಸಿಗಬೇಕಿದೆ.