ಬೆಂಗಳೂರು: ನಗರದ ಅರಮನೆ ಮೈದಾನದಲ್ಲಿ ಬಿಜೆಪಿ ಸಮಾವೇಶ ನಡೆಯುವ ಹಿನ್ನೆಲೆಯಲ್ಲಿ ಟ್ರಾಫಿಕ್ ಪೊಲೀಸರು ಮಾರ್ಗ ಬದಲಾಯಿಸಿದ್ದಾರೆ. ಸಮಾವೇಶಕ್ಕೆ ಬರುವ ರಾಜಕೀಯ ನಾಯಕರು, ಆಹ್ವಾನಿತರಿಗೆ ತ್ರಿಪುರವಾಸಿನಿ ಆವರಣದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.
1. ದಕ್ಷಿಣ ಬೆಂಗಳೂರಿನಿಂದ ವಿಮಾನ ನಿಲ್ದಾಣ: ಬಸವೇಶ್ವರ ಸರ್ಕಲ್- ಹಳೆ ಹೈಗ್ರೌಂಡ್ ಪೊಲೀಸ್ ಠಾಣೆ ಜಂಕ್ಷನ್- ಟಿ ಚೌಡಯ್ಯ ರೋಡ್- ವಿಂಡಸರ್ ಮಾನೋರ್ ಜಂಕ್ಷನ್, ಕಾವೇರಿ ಚಿತ್ರಮಂದಿರ ಜಂಕ್ಷನ್, ಬಾಶ್ಯಂ ಸರ್ಕಲ್- ಜೀವರಾಜ್ ಆಲ್ವಾ ರೋಡ್- ಸದಾಶಿವನಗರ ಪೊಲೀಸ್ ಠಾಣೆ ಜಂಕ್ಷನ್ – ನ್ಯೂ ಬಿಇಎಲ್ ರೋಡ್- ಹೆಬ್ಬಾಳ ಫ್ಲೈಓವರ್.
Advertisement
2. ಪೂರ್ವ ಬೆಂಗಳೂರಿನಿಂದ ವಿಮಾನ ನಿಲ್ದಾಣ: ಎಂಜಿ ರಸ್ತೆ- ಕಾಮರಾಜ್ ರಸ್ತೆ- ತೋಮ್ಸ್ ಕೆಫೆ- ವೀಲರ್ಸ್ ರಸ್ತೆ- ಐಟಿಸಿ ಬ್ರಿಡ್ಜ್- ಎಂಎಸ್ ನಗರ- ಐಒಸಿ ಬ್ರಿಡ್ಜ್ – ಬಾಣಸವಾಡಿ ಮೇನ್ ರೋಡ್ – ಔಟರ್ ರಿಂಗ್ ರೋಡ್ – ಹೆಣ್ಣೂರು ರಿಂಗ್ ರೋಡ್ – ನಾಗಾವಾರ ಜಂಕ್ಷನ್ – ಥಣೀಸಂದ್ರ ಮೇನ್ ರೋಡ್ – ಹೆಗಡೆ ನಗರ- ಕಟ್ಟಿಗೆಹಳ್ಳಿ- ಬಾಗಲೂರು ಕ್ರಾಸ್‍ನಿಂದ ವಿಮಾನ ನಿಲ್ದಾಣಕ್ಕೆ ಹೋಗಬಹುದು.
Advertisement
Advertisement
3. ವಿಮಾನ ನಿಲ್ದಾಣದಿಂದ ಬೆಂಗಳೂರು: ಹೆಬ್ಬಾಳ ಫ್ಲೈಓವರ್ ಅಂಡರ್ ಪಾಸ್- ಔಟರ್ ರಿಂಗ್ ರೋಡ್- ನಾಗವಾರ ಜಂಕ್ಷನ್- ತಣೇರಿ ರೋಡ್- ಹೆಣ್ಣೂರು ಜಂಕ್ಷನ್.
Advertisement
4. ವಿಮಾನ ನಿಲ್ದಾಣದಿಂದ ದಕ್ಷಿಣ ಹಾಗೂ ಉತ್ತರ ಬೆಂಗಳೂರು: ವಿಮಾನ ನಿಲ್ದಾಣ- ಹೆಬ್ಬಾಳ ಫ್ಲೈಓವರ್ ಅಂಡರ್ ಪಾಸ್ – ಕುವೆಂಪು ಸರ್ಕಲ್- ಬಿಇಎಲ್ ಸರ್ಕಲ್, ಸದಾಶಿವನಗರ ಪೊಲೀಸ್ ಠಾಣೆ ಜಂಕ್ಷನ್, ಬಿಎಚ್‍ಇಎಲ್ ಸರ್ಕಲ್ – ಮಾರಮ್ಮ ಸರ್ಕಲ್ – ಮಾರ್ಗೋಸ ರಸ್ತೆ – ಕೆ.ಸಿ ಜನರಲ್ ಆಸ್ಪತ್ರೆ
ವಾಹನ ನಿಲುಗಡೆ ಬಂದ್:
ರಮಣ್ ಮಹರ್ಷಿ ರೋಡ್, ಬಳ್ಳಾರಿ ರೋಡ್ ಮತ್ತು ಮೇಕ್ರಿ ಸರ್ಕಲ್, ಜಯಮಹಲ್ ರೋಡ್, ಸದಾಶಿವನಗರ ವಸತಿ ಸಮುಚ್ಚಯ ರಸ್ತೆಗಳು, ಓಲ್ಡ್ ಏರ್ ಪೋರ್ಟ್ ರೋಡ್, ಆರ್ ಟಿ ನಗರ ರೋಡ್, ಕಬ್ಬನ್ ರೋಡ್, ಚಾಲುಕ್ಯ ಸರ್ಕಲ್ ಈ ರಸ್ತೆಗಳಲ್ಲಿ ಮಧ್ಯಾಹ್ನ 2 ರಿಂದ ರಾತ್ರಿ 10 ರವರೆಗೆ ವಾಹನ ನಿಲುಗಡೆ ಬಂದ್ ಆಗಲಿದೆ.
ದಿನನಿತ್ಯ ಸಂಚರಿಸುವ ವಾಹನ ಸವಾರರ ಮಾರ್ಗ ಬದಲಾವಣೆ:
ಬೆಂಗಳೂರು ಸೌಥ್ ಮತ್ತು ವೆಸ್ಟ್ ಭಾಗದಿಂದ ಏರ್ ಪೋರ್ಟ್ ರೋಡ್‍ಗೆ, ಬಸವೇಶ್ವರ ಸರ್ಕಲ್ -ಕಾವೇರಿ ಜಂಕ್ಷನ್ -ಬಾಷ್ಯಂ ವೃತ್ತ – ನ್ಯೂ ಬಿಇಎಲ್ ರೋಡ್ ಟು ಹೆಬ್ಬಾಳ, ಬೆಂಗಳೂರು ಈಸ್ಟ್ ಟು ಏರ್ ಪೋರ್ಟ್ ರೋಡ್, ಎಂಜಿ ರೋಡ್ – ಬಾಣಸವಾಡಿ ಮುಖ್ಯ ರಸ್ತೆ – ಥಣಿಸಂದ್ರ ರೋಡ್ – ಹೆಗಡೆ ನಗರ -ಬಾಗಲೂರು ಕ್ರಾಸ್.
ಭದ್ರತೆಗೆ ಮೂರು ಸಾವಿರ ಪೊಲೀಸರ ನಿಯೋಜನೆ ಮಾಡಲಾಗಿದೆ. ಪಶ್ಚಿಮ ವಲಯದ ಹೆಚ್ಚುವರಿ ಪೊಲೀಸ್ ಆಯುಕ್ತ ಬಿಕೆ ಸಿಂಗ್ ನೇತೃತ್ವದಲ್ಲಿ ಬಿಗಿ ಭದ್ರತೆ ಒದಗಿಸಲಾಗಿದೆ.