ರಾಯ್ಪುರ: ರಣ ಬಿಸಿಲಿರಲಿ, ಮಳೆಯಿರಲಿ ತಮ್ಮ ಕರ್ತವ್ಯ ನಿರ್ವಹಿಸುವ ಟ್ರಾಫಿಕ್ ಪೊಲೀಸರಿಗೆ ಛತ್ತೀಸ್‍ಗಡ ಸರ್ಕಾರ ಹವಾ ನಿಯಂತ್ರಿತ ಎಸಿ ಹೆಲ್ಮೆಟ್‍ಗಳನ್ನು ನೀಡಲು ತಿರ್ಮಾನಿಸಿ ಎಲ್ಲರ ಗಮನ ಸೆಳೆದಿದೆ.
ಸಂಚಾರಿ ಪೊಲೀಸರು ಹಾಗೂ ಇತರೇ ಫೀಲ್ಡ್ ಆಫಿಸರ್ ಗಳು ಸುಡು ಬಿಸಿಲಿದ್ದರೂ ಲೆಕ್ಕಿಸದೆ ಸಾರ್ವಜನಿಕರ ಸೇವೆಗೆ ಬದ್ಧರಾಗಿದ್ದಾರೆ. ಹೀಗಾಗಿ ಬಿಸಿಲಲ್ಲಿ ನಿಂತು ಸುಸ್ತಾಗುತ್ತಿರುವ ಸಿಬ್ಬಂದಿಗೆ ಛತ್ತೀಸ್‍ಗಡ ಸರ್ಕಾರ ಎಸಿ ಹೆಲ್ಮೆಟ್ ನೀಡಿ ಸಹಾಯ ಮಾಡಲು ಮುಂದಾಗಿದೆ. ಸುಡುವ ಬಿಸಿಲಿನಲ್ಲಿ ಕೂಲ್ ಆಗಿ ಕೆಲಸ ಮಾಡಲು ಸಹಾಯವಾಗಲಿ ಎಂದು ಈ ಪ್ಲಾನ್ ಮಾಡಿದೆ.
Advertisement
Advertisement
ಈ ಬಗ್ಗೆ ಪ್ರತಿಕ್ರಿಯಿಸಿರುವ ಛತ್ತೀಸ್‍ಗಡ ಪೊಲೀಸ್ ಮಹಾ ನಿರ್ದೇಶಕ ಡಿ.ಎಂ.ಅಶ್ವಥಿ, ಮೊದಲ ಹಂತದಲ್ಲಿ ಅಂತಹ ಎರಡು ಹೆಲ್ಮೆಟ್‍ಗಳನ್ನು ಬಳಸಿ ಪರಿಶೀಲಿಸಲಾಗುವುದು. ಒಂದು ವೇಳೆ ಈ ಉಪಾಯ ಉತ್ತಮ ಫಲಿತಾಂಶ ನೀಡಿದರೆ ಸಂಚಾರಿ ಪೊಲೀಸರು, ಸೆಕ್ಯೂರಿಟಿ ಗಾರ್ಡ್‍ಗಳು ಸೇರಿದಂತೆ ಎಲ್ಲಾ ಫೀಲ್ಡ್ ಆಫಿಸರ್ ಗಳಿಗೆ ಎಸಿ ಹೆಲ್ಮೆಟ್ ನೀಡಲಾಗುವುದು ತಿಳಿಸಿದರು.
Advertisement
Advertisement
ಪ್ರತಿನಿತ್ಯ ರಾಜ್ಯದಲ್ಲಿ ಸುಮಾರು 10 ಸಾವಿರಕ್ಕೂ ಅಧಿಕ ಸಂಚಾರಿ ಪೊಲೀಸರು ಸುಡು ಬಿಸಿಲಿನಲ್ಲಿ ನಿಂತು ಕೆಲಸ ಮಾಡುತ್ತಿದ್ದಾರೆ. ಅವರಿಗಾಗಿ ಬ್ಯಾಟರಿ ಮತ್ತು ಚಿಪ್ ಆಧಾರಿತ ಹವಾ ನಿಯಂತ್ರಿತ ಹೆಲ್ಮೆಟ್ ನೀಡಲು ಯೋಚಿಸಲಾಗಿದೆ. ಇದರಿಂದ ಬಿಸಿಲಿನಲ್ಲಿ ಹೆಚ್ಚು ತಾಪಮಾನದಿಂದ ಸಿಬ್ಬಂದಿ ಅಸ್ವಸ್ಥ ಅಥವಾ ಅನಾರೋಗ್ಯಕ್ಕಿಡಾಗುವ ಸಂಭವ ಕಡಿಮೆಯಾಗುತ್ತದೆ ಎಂದು ಹೇಳಿದರು.
CG Police DGP D.M.Awasthi is testing Air-conditioned helmet for traffic police. New thing to save Traffic men from heat. pic.twitter.com/MPjciicuD4
— Chhattisgarh Police (@CG_Police) June 13, 2019