ಬೆಂಗಳೂರು: ಕೊರೊನಾ ವೈರಸ್ ಕೇಸ್‍ಗಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಬೆಂಗಳೂರು ಟ್ರಾಫಿಕ್ ಪೊಲೀಸರು ಫುಲ್ ಅಲರ್ಟ್ ಆಗಿದ್ದಾರೆ. ಸದಾ ಜನರ ನಡುವೆ ಕೆಲಸ ಮಾಡುವ ಟ್ರಾಫಿಕ್ ಪೊಲೀಸರಿಗೆ ಸಂಚಾರಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ಖಡಕ್ ಆದೇಶ ನೀಡಿದ್ದಾರೆ.
ಠಾಣೆಗೆ ಬರುವವರನ್ನು ಬಾಗಿಲಲ್ಲೇ ತಡೆದು ಸ್ಯಾನಿಟೈಸರ್ ಹಾಕಿ ಒಳಗೆ ಬಿಡಬೇಕು. ಯಾವುದೇ ವ್ಯಕ್ತಿಯೊಂದಿಗೆ ಮಾತಾಡಬೇಕಾದರು ಕನಿಷ್ಟ ಮೂರು ಅಡಿ ದೂರದಲ್ಲಿ ನಿಂತು ಮಾತಾಡಬೇಕು. ಪ್ರತಿಯೊಬ್ಬರು ಕಡ್ಡಾಯವಾಗಿ ಮಾಸ್ಕ್ ಧರಿಸಿ ಕರ್ವತ್ಯ ನಿರ್ವಹಿಸಬೇಕು. ಯಾವುದೇ ಸಿಬ್ಬಂದಿಗೆ ಕೆಮ್ಮು, ನೆಗಡಿ, ಶೀತ, ಜ್ವರದಂತ ಲಕ್ಷಣಗಳು ಕಾಣಿಸಿಕೊಂಡರೆ ಆ ಸಿಬ್ಬಂದಿ ಕಡ್ಡಯವಾಗಿ ರಜೆ ತಗೋಬೇಕು ಎಂದು ರವಿಕಾಂತೇಗೌಡ ಆದೇಶಿಸಿದ್ದಾರೆ.
Advertisement
Advertisement
ರವಿಕಾಂತೇಗೌಡ ಅವರ ಈ ಆದೇಶ ಎಲ್ಲಾ ಸಿಬ್ಬಂದಿ ಪಾಲಿಸುತ್ತಿಲ್ಲ. ಬಹುತೇಕರು ಯಾವುದೇ ಮಾಸ್ಕ್ ಇಲ್ಲದೇ ಓಡಾಡುತ್ತಿದ್ದಾರೆ. ಠಾಣೆಗಳಲ್ಲೂ ಕೂಡ ಮಾಸ್ಕ್ ಇಲ್ಲದೇ ಕೆಲಸ ನಿರ್ವಹಿಸುತ್ತಿರುವುದು ಕಂಡು ಬಂದಿದ್ದು, ಮಾಸ್ಕ್ ಮತ್ತು ಸ್ಯಾನಿಟೈಜರ್ ಖರೀದಿಗೆ ನಾವೇ ಹಣ ಹಾಕಿಕೊಳ್ಳಬೇಕು ಎಂದು ಕೆಲ ಸಿಬ್ಬಂದಿ ಬೇಸರ ವ್ಯಕ್ತಪಡಿಸಿದ್ದಾರೆ. ಇದರ ಜೊತೆಗೆ ಕೆಲ ಸಿಬ್ಬಂದಿ ಕೂಡ ಕೊರೊನಾ ಬಗ್ಗೆ ಆತಂಕ ವ್ಯಕ್ತಪಡಿಸಿದ್ದು, ಮುಕ್ತವಾಗಿ ಕೆಲಸ ನಿರ್ವಹಿಸುವುದಕ್ಕೆ ಹಿಂದೇಟು ಹಾಕುತ್ತಿರುವುದು ಕಂಡುಬಂದಿದೆ.