ಬೆಂಗಳೂರು: ಸಿಲಿಕಾನ್ ಸಿಟಿಯ (Silicon City) ಟ್ರಾಫಿಕ್ ಬಿಸಿ ರಾಯಚೂರು (Raichuru) ಜಿಲ್ಲಾ ಉಸ್ತುವಾರಿ ಸಚಿವರಿಗೂ ತಟ್ಟಿದ್ದು ವಿಧಾನಸೌಧದಿಂದ ಬೊಮ್ಮಸಂದ್ರಕ್ಕೆ ಮೆಟ್ರೋದಲ್ಲಿ ಪ್ರಯಾಣಿಸಿದ್ದಾರೆ.
ಟ್ರಾಫಿಕ್ ಸಮಸ್ಯೆಗೆ ಬೇಸತ್ತು ನಮ್ಮ ಮೆಟ್ರೋ ಹತ್ತಿದ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಫೊಟೋಗಳನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಬೆಂಗಳೂರು ಟ್ರಾಫಿಕ್ ಕಂಟ್ರೋಲ್‌ಗೆ ಹೊಸ ಪ್ಲಾನ್- ವಾರದಲ್ಲಿ 1 ದಿನ ವರ್ಕ್ ಫ್ರಂ ಹೋಂ?
ವೈದ್ಯಕೀಯ ವಿಜ್ಞಾನ ಹಾಗೂ ಕೌಶಲ್ಯಾಭಿವೃದ್ದಿ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಬೆಂಗಳೂರಿನ ಲಕ್ಷಾಂತರ ಮಂದಿಯ ಪಾಲಿಗೆ ಸಂಚಾರಕ್ಕೆ ಜೀವನಾಡಿಯಾಗಿರುವ ನಮ್ಮ ಮೆಟ್ರೋದಲ್ಲಿ ಇಂದು ಪ್ರಯಾಣಿಸಿದೆ ಅಂತ ಬರೆದುಕೊಂಡಿದ್ದಾರೆ.
ಬೆಂಗಳೂರಿನ ಲಕ್ಷಾಂತರ ಮಂದಿಯ ಪಾಲಿಗೆ ಸಂಚಾರಕ್ಕೆ ಜೀವನಾಡಿಯಾಗಿರುವ ನಮ್ಮ ಮೆಟ್ರೋದಲ್ಲಿ ಇಂದು ಪ್ರಯಾಣಿಸಿದೆ.
ನಿಗದಿತ ಕಾರ್ಯಕ್ರಮದ ಹಿನ್ನೆಲೆಯಲ್ಲಿ ನಮ್ಮ ಮೆಟ್ರೋದಲ್ಲಿ ವಿಧಾನಸೌಧದಿಂದ ಬೊಮ್ಮಸಂದ್ರದವರೆಗೆ ಹೋಗಿ ಬಂದಿದ್ದು ನಿಜಕ್ಕೂ ಮನಸ್ಸಿಗೆ ಮುದ ನೀಡುವುದರ ಜೊತೆಗೆ ಸಂಚಾರ ದಟ್ಟಣೆಯಿಂದ ಮುಕ್ತಿ ದೊರೆಯಿತು.#nammabengaluru… pic.twitter.com/0izYqFmzp1
— Dr. Sharan Prakash Patil (@S_PrakashPatil) January 27, 2026
ನಿಗದಿತ ಕಾರ್ಯಕ್ರಮದ ಹಿನ್ನೆಲೆ ನಮ್ಮ ಮೆಟ್ರೋದಲ್ಲಿ ವಿಧಾನಸೌಧದಿಂದ ಬೊಮ್ಮಸಂದ್ರದವರೆಗೆ ಹೋಗಿಬಂದಿದ್ದು, ನಿಜಕ್ಕೂ ಮನಸ್ಸಿಗೆ ಮುದ ನೀಡುವುದರ ಜೊತೆಗೆ ಸಂಚಾರ ದಟ್ಟಣೆಯಿಂದ ಮುಕ್ತಿ ದೊರೆಯಿತು ಎಂದಿದ್ದಾರೆ.ಇದನ್ನೂ ಓದಿ: ರಾಜ್ಯ ಸರ್ಕಾರದ ವಿರುದ್ಧ ಫೋನ್ ಟ್ಯಾಪಿಂಗ್ ಆರೋಪ; ಸದನದಲ್ಲಿ ಗದ್ದಲ – ಕೋಲಾಹಲ

