ಕಾರವಾರ: ಕೆರೆ ಬೇಟೆ ವೇಳೆಯಲ್ಲಿ ಮೀನು ಸಿಗಲಿಲ್ಲವೆಂದು ಜನ ಗಲಾಟೆ ಆರಂಭಿಸಿ ಸ್ಥಳದಲ್ಲಿದ್ದ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಕಾನಗೋಡಿನಲ್ಲಿ ನಡೆದಿದೆ.
Advertisement
ಇಂದು ಕಾನಗೋಡಿನ ಮಾರಿಕಾಂಬಾ ದೇವಸ್ಥಾನದ ಕಮಿಟಿ ಕೆರೆಯಲ್ಲಿ ಮೀನು ಹಿಡಿಯಲು ಸೇವೆ ರೂಪದಲ್ಲಿ ಒಬ್ಬೊಬ್ಬರಿಗೆ 600 ರೂ. ಹಣ ಪಡೆದು ಅವಕಾಶ ನೀಡಿತ್ತು. ಮೀನು ಹಿಡಿಯಲು ಐದುಸಾವಿರಕ್ಕೂ ಹೆಚ್ಚು ಜನ ಕಾನಗೋಡಿನ ಕೆರೆಯಲ್ಲಿ ಸೇರಿದ್ದರು. ಆದರೆ ಕೆರೆಯಲ್ಲಿ ಮೀನು ಸಿಕ್ಕಿರಲಿಲ್ಲ. ಇದರಿಂದ ರೊಚ್ಚಿಗೆದ್ದು ಜನ ದೇವಸ್ಥಾನದ ಕಮಿಟಿಯೊಂದಿಗೆ ಗಲಾಟೆ ಆರಂಭಿಸಿದ್ದರು. ಇದನ್ನೂ ಓದಿ: ಮಹಿಳಾ ಶೌಚಾಲಯ ಪ್ರವೇಶಿಸಿ ಬಾಗಿಲು ಲಾಕ್ ಮಾಡಿಕೊಂಡ
Advertisement
ಮೀನು ಸಿಗದ ಕಾರಣ ಹಣ ವಾಪಸ್ ಕೊಡುವಂತೆ ಕಮಿಟಿಯೊಂದಿಗೆ ಗಲಾಟೆ ಆರಂಭಿಸಿದ್ದಾರೆ. ಈ ವೇಳೆ ಸ್ಥಳದಲ್ಲಿದ್ದ ಪೊಲೀಸರು ಗುಂಪು ಚದುರಿಸಲು ಲಾಠಿ ಜಾರ್ಜ್ ಮಾಡಿದ್ದಾರೆ. ಇದರಿಂದ ಮತ್ತಷ್ಟು ಕುಪಿತಗೊಂಡ ಜನ ಪೊಲೀಸರ ಮೇಲೆ ಕಲ್ಲುತೂರಾಟ ನಡೆಸಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣವಿದ್ದು, ಘಟನೆಯಲ್ಲಿ ಪೊಲೀಸರು ಸೇರಿ ಹಲವರಿಗೆ ಗಾಯಗಳಾಗಿವೆ.