ಉಡುಪಿ: ಇಂದು ದೇಶಾದ್ಯಂತ ಹೋಳಿ ಹಬ್ಬದ ಆಚರಣೆ ನಡೆದಿದೆ. ಉಡುಪಿ ಜಿಲ್ಲೆ ಮಣಿಪಾಲ ವಿವಿಯ ವಿದ್ಯಾರ್ಥಿಗಳು ಎಂಐಟಿ ಕಾಲೇಜಿನ ಮೈದಾನದಲ್ಲಿ ಹೋಳಿ ಹಬ್ಬ ಆಚರಿಸಿದರು. ಇವತ್ತು ಕಾಲೇಜಿಗೆ ರಜೆ ನೀಡಲಾಗಿದ್ದು ಸಾವಿರಾರು ಮಂದಿ ಹೋಳಿ ಸೆಲೆಬ್ರೇಷನ್‍ನಲ್ಲಿ ಪಾಲ್ಗೊಂಡರು.
ಮೂರು ದಿನಗಳ ಕಾಲ ಹೋಳಿ ಆಚರಣೆ ಮಣಿಪಾಲದಲ್ಲಿ ಇರುತ್ತದೆ. ಪರಸ್ಪರ ಒಬ್ಬರಿಗೊಬ್ಬರು ಬಣ್ಣ ಎರಚುತ್ತಾ ಯುವಕ ಯುವತಿಯರು ಸಂಭ್ರಮಿಸಿದರು. ಹಾಡಿಗೆ ಹೆಜ್ಜೆ ಹಾಕಿದ್ರು. ಉತ್ತರ ಭಾರತ ಮೂಲದವರೇ ಹೆಚ್ಚಾಗಿರುವ ಮಣಿಪಾಲದಲ್ಲಿ ಪ್ರತೀ ವರ್ಷ ಹೋಳಿ ಸೆಲೆಬ್ರೆಷನ್ ಜೋರಾಗಿಯೇ ಇರುತ್ತದೆ. ಈ ಬಾರಿ ವಿದೇಶದ ವಿದ್ಯಾರ್ಥಿಗಳೂ ಹೋಳಿಯಲ್ಲಿ ಪಾಲ್ಗೊಂಡು ಖುಷಿಪಟ್ಟರು.
Advertisement
Advertisement
ಸಾಂಪ್ರದಾಯಿಕ ಹೋಳಿ: ಇದು ಮಾಡರ್ನ್ ಹೋಳಿಯಾದ್ರೆ ಉಡುಪಿ ಜಿಲ್ಲೆಯಲ್ಲಿ ಸಾಂಪ್ರದಾಯಿಕ ಹೋಳಿ ಆಚರಣೆಯೂ ನಡೆಯುತ್ತದೆ. ಶತಮಾನದ ಹಿಂದೆ ಮಹಾರಾಷ್ಟ್ರದಿಂದ ಬಂದ ಮರಾಠಿಗರು ಇವರು. ಉಡುಪಿ ಜಿಲ್ಲೆಯ ಬ್ರಹ್ಮಾವರ, ಪರ್ಕಳ, ಸರಳೇಬೆಟ್ಟು-ಹಿರೇಬೆಟ್ಟು, ಕಂಚಿಬೈಲು ಮಣಿಪಾಲ ವ್ಯಾಪ್ತಿಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ನೆಲೆಸಿದ್ದಾರೆ.
Advertisement
ಶಿವಾಜಿ ಮಹಾರಾಜನ ವಂಶದವರೆಂದು ಕರೆಸಿಕೊಳ್ಳುವ ನಾಯಕ್ ಜನ ಇವರು ಪ್ರತೀ ಕುಟುಂಬದಿಂದ ಒಬ್ಬ ಈ ಆಚರಣೆಯಲ್ಲಿ ಪಾಲ್ಗೊಳ್ಳುವುದು ಕಡ್ಡಾಯ. ಮನೆ ಮನೆಗೆ ತೆರಳಿ ಗುಮ್ಟೆ ಮತ್ತು ತಾಳ ನುಡಿಸಿ, ಜನಪದ ಹಾಡುಗಳನ್ನು ಹಾಡಿ ಕುಣಿಯುತ್ತಾರೆ. ಕಲಾವಿದರು ದೇವಿ ತುಳಜಾ ಭವಾನಿಯ ಆರಾಧನೆಯ ಪದಗಳನ್ನು ಹಾಡುತ್ತಾರೆ.
Advertisement
ಮನೆಯ ಯಜಮಾನರು ಅಕ್ಕಿ, ಕಾಯಿ, ವೀಳ್ಯ ಕೊಟ್ಟು ಬಂದವರನ್ನು ಸನ್ಮಾನಿಸುತ್ತಾರೆ. ಹೋಳಿ ಕುಣಿಯುವ ಕಲಾವಿದರು ಮಕ್ಕಳನ್ನ ಹಿಡಿದು ಕುಣಿದರೆ ಅವರ ರೋಗ ರುಜಿನಗಳೆಲ್ಲಾ ಕಳೆದು ಹೋಗುತ್ತದೆ ಎಂಬ ನಂಬಿಕೆ ಕೂಡ ಇದೆ.