ಧಾರವಾಡ: ನಗರದ ಮಾರುಕಟ್ಟೆಯಲ್ಲಿ ವ್ಯಾಪಾರಿಗಳು ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಚೆಲ್ಲುವುದರ ವಿರುದ್ಧ ಅರಿವು ಮೂಡಿಸಿದ ಧಾರವಾಡ ಕಿರಾಣಿ ಮತ್ತು ಕಾಯಿಪಲ್ಲೆ ವರ್ತಕರ ಸಂಘ, ಸಾರ್ವಜನಿಕರಿಗೆ ಗುಲಾಬಿ ಹೂವು ನೀಡಿ ಜಾಗೃತಿ ಮೂಡಿಸಿದೆ.
ಧಾರವಾಡ ನಗರದ ಸೂಪರ್ ಮಾರುಕಟ್ಟೆ ಯಾವತ್ತೂ ಕಸದಿಂದ ತುಂಬಿರುತ್ತೆ ಇದರ ಅರಿವನ್ನ ಮೂಡಿಸಲು ವರ್ತಕರ ಸಂಘದ ಸದಸ್ಯರು ಮಾರುಕಟ್ಟೆಗೆ ಕಾಯಿಪಲ್ಲೆ ವ್ಯಾಪಾರಿಗಳಿಗೆ ಒಂದೊಂದು ಗುಲಾಬಿ ಹೂವನ್ನ ನೀಡುವ ಮೂಲಕ ವಿನೂತನ ಜಾಗೃತಿ ಮೂಡಿಸಿದ್ದಾರೆ.
ಬೀದಿ ಬದಿ ವ್ಯಾಪಾರ ಮುಗಿದ ನಂತರ ಉಳಿದ ಕಾಯಿಪಲ್ಲೆ ಜಾಗದಲ್ಲೇ ಬಿಟ್ಟು ಹೋಗುತ್ತಿದ್ದ ವ್ಯಾಪಾರಿಗಳಿಗೆ, ಕಸ ಬುಟ್ಟಿಗೆ ಅದನ್ನ ಹಾಕಬೇಕು ಎಂದು ಅರಿವು ಮೂಡಿಸಲಾಯಿತು. ಅಷ್ಟೇ ಅಲ್ಲದೇ ಸಂಘದಿಂದ ಪ್ರತಿ ದಿನ ಇದರ ಬಗ್ಗೆ ನಿಗಾವಹಿಸಲು ಜನರನ್ನು ಕೂಡಾ ವರ್ತಕರ ಸಂಘದಿಂದಲೇ ನೇಮಿಸಲಾಗುವುದು ಎಂದು ತಿಳಿಸಿದರು.






