– ಹಿಂದೂ ಅಂಗಡಿಗಳ ಮುಂದೆ ಭಗವಾಧ್ವಜ
ಮಂಗಳೂರು: ಮಂಗಳಾದೇವಿ ದೇವಸ್ಥಾನದ (Mangaladevi Temple) ನವರಾತ್ರಿ ಉತ್ಸವದಲ್ಲಿ ಧರ್ಮ ದಂಗಲ್ ಆರಂಭವಾಗಿದೆ.
Advertisement
ಹಿಂದೂ ಸಂಘಟನೆಗಳ ವಿರೋಧದ ನಡುವೆಯೂ ಮುಸ್ಲಿಂ ವ್ಯಾಪಾರಿಗಳಿಗೆ ದ.ಕ ಜಿಲ್ಲಾಡಳಿತ ಅವಕಾಶ ನೀಡಿದೆ. ಹೀಗಾಗಿ ಹಿಂದೂಗಳ ಅಂಗಡಿಗಳಲ್ಲೇ ವ್ಯಾಪಾರ ಮಾಡುವಂತೆ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಹಿಂದೂ ಸಂಘಟನೆಗಳು ಮನವಿ ಮಾಡಿವೆ. ಇದನ್ನೂ ಓದಿ: ಒರಿಜಿನಲ್ ಅಂತ ಸಿಎಂ ಇಬ್ರಾಹಿಂ ಬೋರ್ಡ್ ಹಾಕಿಕೊಳ್ಳಲಿ: ಹೆಚ್‍ಡಿಕೆ
Advertisement
Advertisement
ಜಾತ್ರೋತ್ಸವದಲ್ಲಿ ವಿಶ್ವಹಿಂದೂಪರಿಷತ್-ಬಜರಂಗದಳ ಕಾರ್ಯಕರ್ತರು ಹಿಂದೂ ವ್ಯಾಪಾರಿಗಳ ಅಂಗಡಿಗಳ ಮುಂದೆ ಭಗವಾಧ್ವಜ ಅಳವಡಿಸಿದ್ದಾರೆ. ವಿಎಚ್‍ಪಿ ಮುಖಂಡ ಶರಣ್ ಪಂಪ್‍ವೆಲ್ ನೇತೃತ್ವದಲ್ಲಿ ಹಿಂದೂ ವ್ಯಾಪಾರಿಗಳ ಅಂಗಡಿ ಗುರುತುಗಾಗಿ ಭಗವಾಧ್ವಜ ಹಾಕಿದ್ದಾರೆ.
Advertisement
ದೇವಸ್ಥಾನದ ಆಸು-ಪಾಸಿನಲ್ಲಿ ಹಿಂದೂಗಳಿಗೆ ಅವಕಾಶ ನೀಡಬೇಕು. ಹಿಂದೂ ದೇವರನ್ನು ನಂಬದ, ಮೂರ್ತಿ ಪೂಜೆ ವಿರೋಧಿಗಳಿಗೆ ನಮ್ಮ ಉತ್ಸವದಲ್ಲಿ ಅವಕಾಶ ಇಲ್ಲ. ನಮ್ಮ ದೇವಸ್ಥಾನದಲ್ಲಿ ವ್ಯಾಪಾರ ಮಾಡೋದು ಹಿಂದೂ ವ್ಯಾಪಾರಿಗಳ ಹಕ್ಕು. ಮುಸ್ಲಿಂ ವ್ಯಾಪಾರಿಗಳೂ ಈಗ ಕೈಗೆ ನೂಲು, ಶಾಲು ಹಾಕಿ ವ್ಯಾಪಾರ ಮಾಡುತ್ತಾರೆ. ಅದಕ್ಕಾಗಿ ಗುರುತಿಗಾಗಿ ಹಿಂದೂ ವ್ಯಾಪಾರಸ್ಥರ ಅಂಗಡಿಗಳ ಮುಂದೆ ಭಗವಾಧ್ವಜ ಹಾಕಿದ್ದೇವೆ ಎಂದು ತಿಳಿಸಿದ್ದಾರೆ.
Web Stories