ಬಳ್ಳಾರಿ/ವಿಜಯನಗರ: ಕಬ್ಬಿಣದ ಸರಳು ತುಂಬಿದ್ದ ಟ್ರ್ಯಾಕ್ಟರ್ ಟ್ರ್ಯಾಲಿ ಪಲ್ಟಿಯಾಗಿ ಓರ್ವ ಕಾರ್ಮಿಕ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕು ಚಿಕ್ಕಜೋಗಿಹಳ್ಳಿ ಗ್ರಾಮದ ಹೊರವಲಯದಲ್ಲಿ ನಡೆದಿದೆ.
Advertisement
ಟ್ರ್ಯಾಕ್ಟರ್ ಜುಂಬೋನಹಳ್ಳಿ ಗ್ರಾಮದ ಜುಂಜೂರ ಮಂಜುನಾಥರಿಗೆ ಸೇರಿದ್ದಾಗಿದ್ದು, ಟ್ರ್ಯಾಕ್ಟರ್ ಚಾಲಕ ಮಂಜುನಾಥ ಅವರು ಅಜಾಗರೂಕತೆ ಅಪಘಾತಕ್ಕೆ ಕಾರಣ ಎಂದು ಹೇಳಲಾಗುತಿದ್ದು, ಕಬ್ಬಿಣದ ಸರಳುಗಳನ್ನು ತುಂಬಿಕೊಂಡು ಗ್ರಾಮಕ್ಕೆ ಮರಳುವಾಗ ಟ್ರ್ಯಾಲಿ ಪಲ್ಟಿಹೊಡೆದಿದೆ. ಪರಿಣಾಮ ಟ್ರ್ಯಾಲಿಯಲ್ಲಿದ್ದ ಕಾರ್ಮಿಕ ಜುಂಬೋನಹಳ್ಳಿ ನಿವಾಸಿ ಬಸವರಾಜ (25)ಸ್ಥಳದಲ್ಲಿ ಮೃತಪಟ್ಟಿದ್ದಾರೆ. ಇದನ್ನೂ ಓದಿ:ತವರು ಜಿಲ್ಲೆಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಿಎಂ ಬಸವರಾಜ ಬೊಮ್ಮಾಯಿ ಚಾಲನೆ
Advertisement
Advertisement
ಅತೀ ವೇಗವಾಗಿ ಟ್ರ್ಯಾಕ್ಟರ್ ಚಾಲನೆ ಮಾಡಿದ ಕಾರಣ ಟ್ರ್ಯಾಕ್ಟರ್ ಟ್ರಾಲಿ ಆಯ ತಪ್ಪಿ ಅಪಘಾತವಾಗಿದೆ. ಟ್ರ್ಯಾಕ್ಟರ್ ಟ್ರ್ಯಾಲಿ ಅಡಿಯಲ್ಲಿ ಸಿಲುಕಿದ್ದ ಬಸವರಾಜ್‍ರನ್ನು ಸ್ಥಳೀಯರು ರಕ್ಷಣೆ ಮಾಡಲು ಹರಸಾಹಸ ಪಟ್ಟಿದ್ದು, ದೇಹವನ್ನು ಹೊರತೆಗೆಯುವ ಮೊದಲೇ ಬಸವಾರಾಜ್ ಪ್ರಾಣ ಬಿಟ್ಟಿದ್ದಾರೆ. ಈ ಸಂಬಂಧ ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇದನ್ನೂ ಓದಿ:ಅರಗ ಜ್ಞಾನೆಂದ್ರಗೆ ತಾವು ಸಚಿವರು ಅಂತ ಜ್ಞಾನವಿರಲಿ: ಎಚ್. ಕೆ. ಪಾಟೀಲ್
Advertisement