Connect with us

ವಾಹನವನ್ನ ಹಿಂದಿಕ್ಕಲು ಹೋಗಿ ಕೆರೆಗೆ ಉರುಳಿದ ಟ್ರ್ಯಾಕ್ಟರ್- ಚಾಲಕ ಸಾವು

ವಾಹನವನ್ನ ಹಿಂದಿಕ್ಕಲು ಹೋಗಿ ಕೆರೆಗೆ ಉರುಳಿದ ಟ್ರ್ಯಾಕ್ಟರ್- ಚಾಲಕ ಸಾವು

ಬೆಂಗಳೂರು: ವಾಹನವನ್ನು ಹಿಂದಿಕ್ಕಲು ಹೋಗಿ ಚಾಲಕನ ನಿಯಂತ್ರಣ ತಪ್ಪಿದ ಟ್ರ್ಯಾಕ್ಟರ್ ಕೆರೆಗೆ ಉರುಳಿದ ಘಟನೆ ಬೆಂಗಳೂರಿನ ಕೆ.ಆರ್.ಪುರ ಸಮೀಪದ ಹೊರಮಾವು ಅಗರ ಕೆರೆಯಲ್ಲಿ ನಡೆದಿದೆ.

ಟ್ರ್ಯಾಕ್ಟರ್ ಚಾಲಕ ಕೊಪ್ಪಳ ಮೂಲದ ಕಲ್ಲೇಶ್(31) ಮೃತ ದುರ್ದೈವಿ. ಈ ಘಟನೆಯಲ್ಲಿ ಮತ್ತೊಬ್ಬ ವ್ಯಕ್ತಿ ಬಂಡೆಪ್ಪ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಶುಕ್ರವಾರ ಮಧ್ಯಾಹ್ನ ಸುಮಾರು 1:15 ರ ವೇಳೆ ಈ ಅವಘಡ ಸಂಭವಿಸಿದೆ.

ಘಟನೆ ಬಗ್ಗೆ ಮಾಹಿತಿ ತಿಳಿದ ಬಾಣಸವಾಡಿ ಸಂಚಾರಿ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಸ್ಥಳಕ್ಕೆ ಭೇಟಿ ನೀಡಿ ಕ್ರೇನ್ ಮೂಲಕ ಟ್ರ್ಯಾಕ್ಟರ್ ಮೇಲೆತ್ತಿದ್ದಾರೆ. ಈ ಅಪಘಾತದಿಂದಾಗಿ ಹೊರಮಾವು ಅಗರ ರಸ್ತೆಯಲ್ಲಿ ಕೆಲ ಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು.