ತುಮಕೂರು: ಜೆಜೆಎಂ ಕಾಮಗಾರಿಗೆ ತೆಗೆದಿದ್ದ ಟ್ರಂಚ್‌ಗೆ ಟ್ರ‍್ಯಾಕ್ಟರ್ (Tractor) ಉರುಳಿ ಬಿದ್ದು ಚಾಲಕನ (Driver) ಕೈ ಮೂಳೆ ಮುರಿದಿರುವ ಘಟನೆ ಗುಬ್ಬಿ (Gubbi) ತಾಲೂಕಿನ ಚಿಕ್ಕಚೆಂಗಾವಿ ಗ್ರಾಮದ ಬಳಿ ನಡೆದಿದೆ.
ಗ್ರಾಮದಿಂದ ಹೆಬ್ಬೂರನ್ನು ಸಂಪರ್ಕಿಸುವ ರಸ್ತೆ ಬದಿ ಪೈಪ್ ಹುಗಿಯಲು ತೆಗೆದಿರುವ ಟ್ರಂಚ್ ಮುಚ್ಚದೆ ಅನೇಕ ದಿನಗಳಿಂದ ಹಾಗೆಯೇ ಬಿಡಲಾಗಿದೆ. ಸಂಬಂಧಿಸಿದ ಗುತ್ತಿಗೆದಾರರು ಹಾಗೂ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಮೂಡಬಿದ್ರೆ| ಆಳ್ವಾಸ್ ವಿರಾಸತ್ 2024ಕ್ಕೆ ಅದ್ದೂರಿ ಚಾಲನೆ
Advertisement
ಜೆಜೆಎಂ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದ್ದು, ಅಪೂರ್ಣಗೊಂಡಿದೆ. ಹಲವೆಡೆ ಪೈಪ್‌ಗಳನ್ನು ಸಂಪರ್ಕಿಸದೆ ಇರುವುದರಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿದೆ. ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಸರ್ಕಾರ ಯೋಜನೆಯನ್ನು ಜಾರಿಗೊಳಿಸಿದ್ದರೂ, ಸಂಬಂಧಿಸಿದ ಅಧಿಕಾರಿಗಳು ವ್ಯವಸ್ಥಿತವಾಗಿ ಅನುಷ್ಠಾನಗೊಳಿಸದೆ ಅನುದಾನವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ. ಇದನ್ನೂ ಓದಿ: ಕೊಳ್ಳೇಗಾಲಕ್ಕೆ ಸಿಎಂ ಭೇಟಿ – ಎಸ್. ಜಯಣ್ಣ ಪಾರ್ಥಿವ ಶರೀರಕ್ಕೆ ಗೌರವ ನಮನ ಸಲ್ಲಿಕೆ
Advertisement
Advertisement
ಅಧಿಕಾರಿಗಳು ಶೀಘ್ರ ಕ್ರಮ ಕೈಗೊಂಡು ಅಪೂರ್ಣಗೊಂಡಿರುವ ಕಾಮಗಾರಿಯನ್ನು ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕು. ಪೈಪ್ ಹುಗಿಯಲು ತೆಗೆದಿರುವ ಟ್ರೆಂಚ್‌ಗಳನ್ನು ಶೀಘ್ರ ಮುಚ್ಚಬೇಕು. ಇಲ್ಲವಾದಲ್ಲಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಗ್ರಾಮಸ್ಥರು ಒತ್ತಾಯಿಸಿದರು. ಇದನ್ನೂ ಓದಿ: ಪೊಲೀಸ್ ಮಾಹಿತಿದಾರ ಎಂದು ಬಿಜೆಪಿ ನಾಯಕನ ಕೊಂದ ನಕ್ಸಲರು
Advertisement