ಬೆಂಗಳೂರು: ಹೊಸ ಮೋಟಾರು ವಾಹನ ಕಾಯ್ದೆ ತಿದ್ದುಪಡಿಯ ಹೊಸ ದಂಡಕ್ಕೆ ಭಯಗೊಂಡ ಚಾಲಕನೋರ್ವ ಟ್ರ್ಯಾಕ್ಟರ್ ಚಾಲನೆ ವೇಳೆಯೂ ಹೆಲ್ಮೆಟ್ ಧರಿಸಿದ್ದಾರೆ. ಚಾಲಕನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹುಬ್ಬಳ್ಳಿಯ ಗಬ್ಬೂರು ಕ್ರಾಸ್ ಬಳಿ ಚಾಲಕ ಹೆಲ್ಮೆಟ್ ಧರಿಸಿ ಟ್ರ್ಯಾಕ್ಟರ್ ಚಾಲನೆ ಮಾಡುತ್ತಿರೋ ಸ್ಥಳೀಯರು ತಮ್ಮ ಮೊಬೈಲಿನಲ್ಲಿ ಸೆರೆ ಹಿಡಿದುಕೊಂಡಿದ್ದಾರೆ. ಹೆಲ್ಮೆಟ್ ಧರಿಸಿ ಮುಖ್ಯ ರಸ್ತೆ ಪ್ರವೇಶಿಸುವ ಚಾಲಕ ಒಮ್ಮೆ ಅತ್ತಿತ್ತ ನೋಡಿ ಹೋಗುತ್ತಾನೆ. ಜನರು ಮಾತ್ರ ಚಾಲಕನನ್ನು ನೋಡುತ್ತಾ ನಿಂತಿರೋದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.
Advertisement
Advertisement
ಕೇಂದ್ರ ಸರ್ಕಾರದ ವಿಧಿಸಿದ ದಂಡಕ್ಕೆ ವ್ಯಾಪಕ್ಕೆ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮೊತ್ತದ ಪ್ರಮಾಣವನ್ನು ಇಳಿಸಿದೆ. ಸೆಪ್ಟೆಂಬರ್ 21ರಂದು ರಾಜ್ಯ ಸರ್ಕಾರ ಹೊಸ ದಂಡದ ಪರಿಷ್ಕೃತ ದರವನ್ನು ನಿಗದಿಪಡಿಸಿ ಆದೇಶ ಹೊರಡಿಸಿದೆ.
Advertisement
ರಾಜ್ಯ ಸರ್ಕಾರ ಸಂಚಾರಿ ನಿಯಮ ಉಲ್ಲಂಘನೆಯ ದಂಡದ ಮೊತ್ತ ಇಳಿಸಿದ್ದರೂ ಪ್ರಕರಣಗಳು ಮಾತ್ರ ಕಡಿಮೆಯಾಗಿಲ್ಲ. ಮಂಗಳವಾರ ಒಂದೇ ದಿನಕ್ಕೆ ಸಿಲಿಕಾನ್ ಸಿಟಿಯಲ್ಲಿ ಟ್ರಾಫಿಕ್ ಪೊಲೀಸರು ಬರೋಬ್ಬರಿ 21.5 ಲಕ್ಷಕ್ಕೂ ಅಧಿಕ ದಂಡ ಸಂಗ್ರಹಿಸಿದ್ದಾರೆ. 24 ಗಂಟೆಯಲ್ಲಿ ಅಂದರೆ ಮಂಗಳವಾರ ಒಂದೇ ದಿನಕ್ಕೆ 6,782 ಟ್ರಾಫಿಕ್ ನಿಯಮ ಉಲ್ಲಂಘನೆಯ ಪ್ರಕರಣಗಳು ಸಿಲಿಕಾನ್ ಸಿಟಿ ವಾಹನ ಸವಾರರಿಂದ ದಾಖಲಾಗಿವೆ.