ಕಾರವಾರ: ರೈಲ್ವೆ ನಿರ್ವಾಹಕರೊಬ್ಬರು ಹಳಿಯ ಮೇಲೆ ಐದು ನಿಮಿಷದಲ್ಲಿ 500 ಮೀಟರ್ ಓಡಿ ರೈಲ್ವೆ ದುರಂತವೊಂದನ್ನು ತಪ್ಪಿಸಿದ ಘಟನೆ ಉತ್ತರ ಕನ್ನಡ (Uttara Kannada) ಜಿಲ್ಲೆಯ ಕೊಂಕಣ ರೈಲ್ವೆ ಮಾರ್ಗದಲ್ಲಿ ನಡೆದಿದೆ.
ಭಟ್ಕಳದ ಮಾಧವ ನಾಯ್ಕ ರೈಲು ದುರಂತ ತಪ್ಪಿಸಿದ ರೈಲ್ವೆ ನಿರ್ವಾಹಕ. ಕೊಂಕಣ ರೈಲ್ವೆ ಮಾರ್ಗದ ಕುಮಟಾ-ಹೊನ್ನಾವರ ನಡುವಿನ ಹಳಿಯ ವೆಲ್ಡಿಂಗ್ ಬಿಟ್ಟಿತ್ತು. ಇದರಿಂದ ಇದೇ ಮಾರ್ಗದಲ್ಲಿ ಬರುವ ರಾಜಧಾನಿ ಎಕ್ಸ್ಪ್ರೆಸ್ ರೈಲು ಹಳಿ ತಪ್ಪಿ ದುರಂತವಾಗುವ ಸಾಧ್ಯತೆ ಇತ್ತು. ಇದನ್ನೂ ಓದಿ: ಮಡಿಕೇರಿಯಲ್ಲಿ ಶ್ರೀಮಂತ ಗಣಪ ಮತ್ತಷ್ಟು ಸಿರಿವಂತ!
Advertisement
Advertisement
ರಾತ್ರಿ ಕರ್ತವ್ಯದಲ್ಲಿದ್ದ ರೈಲ್ವೆ ನಿರ್ವಾಹಕ ಮಾಧವ ನಾಯ್ಕ, ಹಳಿ ಪರಿಶೀಲನೆ ಮಾಡುವಾಗ ಹಳಿಯ ವೆಲ್ಡಿಂಗ್ ಬಿಟ್ಟಿರುವುದು ಪತ್ತೆಯಾಗಿತ್ತು. ಸ್ಟೇಶನ್ ಮಾಸ್ಟರ್‌ಗೆ ಕರೆ ಮಾಡಿದ್ದರೂ ಸಂಪರ್ಕ ಸಾಧ್ಯವಾಗಿರಲಿಲ್ಲ. ಹೀಗಾಗಿ ನಿರ್ವಾಹಕ ಕೆಂಪು ದೀಪ ಹಿಡಿದು ಹಳಿ ಮೇಲೆ 500 ಮೀಟರ್ ದೂರದವರೆಗೆ ಓಡಿ ಹೊನ್ನಾವರದಿಂದ ಕಾರವಾರದತ್ತ ಬರುತಿದ್ದ ರೈಲಿಗೆ ಕೆಂಪು ದೀಪ ತೋರಿಸಿ ರೈಲನ್ನು ನಿಲ್ಲಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‌ನಲ್ಲಿ ನಾನು ಸಿಎಂ ಆಗ್ತೀನಿ, ಸೀನಿಯಾರಿಟಿ ಬೇಕಿಲ್ಲ: ಎಂ.ಬಿ ಪಾಟೀಲ್