ಟೊಯೋಟಾ ಕಿರ್ಲೋಸ್ಕರ್ ಮೋಟಾರ್ (Toyota Kirloskar Motor) ಕಂಪೆನಿಯು ಇನ್ನೋವಾ ಹೈಕ್ರಾಸ್(Innova Hycross) ಕಾರಿನ ZX ಮತ್ತು ZX(O) ಅವತರಣಿಕೆಗಳ ಬುಕ್ಕಿಂಗ್ ಅನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಪೂರೈಕೆ ಸವಾಲುಗಳ ಕಾರಣದಿಂದ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಕಂಪನಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಹೈಕ್ರಾಸ್‌ನ ಇತರ ಅವತರಣಿಕೆಗಳ ಬುಕ್ಕಿಂಗ್ ಮುಂದುವರಿಯಲಿದೆ.
ಟೊಯೋಟಾ ಇನ್ನೋವಾ ಹೈಕ್ರಾಸ್ VX, VX(O), ZX ಮತ್ತು ZX(O) ಅವತರಣಿಕೆಗಳು ಹೈಬ್ರಿಡ್ ಎಂಜಿನ್(Hybrid Engine) ಹೊಂದಿದ್ದು ಗ್ರಾಹಕರಿಂದ ಭಾರೀ ಬೇಡಿಕೆ ವ್ಯಕ್ತವಾಗುತ್ತಿದೆ. ಇದಕ್ಕೆ ಪ್ರಮುಖ ಕಾರಣ 23.24 ಕಿಲೋಮೀಟರ್ ಮೈಲೇಜ್(ARAI). ಇದನ್ನೂ ಓದಿ: ಕ್ರ್ಯಾಶ್ ಟೆಸ್ಟ್‌ನಲ್ಲಿ 5 ಸ್ಟಾರ್ ಪಡೆದ ಫೋಕ್ಸ್‌ವ್ಯಾಗನ್ ವರ್ಟಸ್, ಸ್ಕೋಡಾ ಸ್ಲಾವಿಯಾ
ಇನ್ನೋವಾ ಹೈಕ್ರಾಸ್ ಹೈಬ್ರಿಡ್ ಕಾರು TNGA ಹೈಬ್ರಿಡ್ ಪೆಟ್ರೋಲ್ ಎಂಜಿನ್ ಮತ್ತು E-ಡ್ರೈವ್ ಟ್ರಾನ್ಸ್‌ಮಿಷನ್ ಹೊಂದಿದೆ. ಈ ಕಾರಿನಲ್ಲಿ ಟೊಯೋಟಾದ 5ನೇ ತಲೆಮಾರಿನ ಸೆಲ್ಫ್ ಚಾರ್ಜಿಂಗ್ ಹೈಬ್ರಿಡ್ ಎಲೆಕ್ಟ್ರಿಕ್ ತಂತ್ರಜ್ಞಾನವನ್ನು ಬಳಸಲಾಗಿದೆ. ಹೈಕ್ರಾಸ್‌ನ ಪ್ರಮುಖ ಆಕರ್ಷಣೆ ಎಂದರೆ ಪ್ಯಾನರೋಮಿಕ್ ಸನ್‌ರೂಫ್. ಡೈನಾಮಿಕ್ ರಾಡಾರ್ ಕ್ರೂಸ್ ಕಂಟ್ರೋಲ್, ಲೇನ್ ಟ್ರೇಸ್ ಅಸಿಸ್ಟ್, ಸೇರಿದಂತೆ ಬಹಳಷ್ಟು ವೈಶಿಷ್ಟ್ಯಗಳನ್ನು ಹೈಕ್ರಾಸ್ ಹೊಂದಿದೆ. ಇದನ್ನೂ ಓದಿ: ಗ್ರಾಹಕರಿಗೆ ಶಾಕ್ ಕೊಟ್ಟ Maruti Suzuki – ಏಪ್ರಿಲ್‌ನಿಂದ ಬೆಲೆ ಮತ್ತಷ್ಟು ದುಬಾರಿ!
ಇನ್ನೋವಾ ಹೈಕ್ರಾಸ್ ಕಾರಿನ ಬೆಲೆ( ಎಕ್ಸ್-ಶೋರೂಮ್, ಬೆಂಗಳೂರು) ಈ ಕೆಳಗಿನಂತೆ ಇದೆ.
* ಇನ್ನೋವಾ ಹೈಕ್ರಾಸ್ ಹೈಬ್ರಿಡ್ VX 24,76,000 – 24,81,000 ರೂ.
* ಇನ್ನೋವಾ ಹೈಕ್ರಾಸ್ ಹೈಬ್ರಿಡ್ VX(O) 26,73,000 – 26,78,000 ರೂ.
* ಇನ್ನೋವಾ ಹೈಕ್ರಾಸ್ ಹೈಬ್ರಿಡ್ ZX 29,08,000 – 29,72,000 ರೂ.