ದೇಶದ ಪ್ರಮುಖ ವಾಹನ ತಯಾರಿಕಾ ಕಂಪನಿಗಳಾದ ಟಾಟಾ ಮೋಟಾರ್ಸ, ಮಹೀಂದ್ರಾ & ಮಹೀಂದ್ರಾ, ಟೊಯೋಟಾ ಕಿರ್ಲೋಸ್ಕರ್ ಮೋಟಾರ್ಸ್ (Toyota Kirloskar Motor) ಮತ್ತು ರೆನೊ ಇಂಡಿಯಾ ತಮ್ಮ ವಾಹನಗಳ ಬೆಲೆಯನ್ನು ಕಡಿತಗೊಳಿಸಿವೆ. ಇತ್ತೀಚಿಗೆ ನಡೆದ ಜಿಎಸ್‌ಟಿ (GST) ಮಂಡಳಿ ಸಭೆಯಲ್ಲಿ ಕಾರುಗಳ ಮೇಲಿನ ಜಿಎಸ್‌ಟಿಯನ್ನು ಪರಿಷ್ಕರಿಸಲಾಗಿತ್ತು. ಈಗ ದರ ಕಡಿತದ ಪ್ರಯೋಜನಗಳನ್ನು ಸಂಪೂರ್ಣವಾಗಿ ಗ್ರಾಹಕರಿಗೆ ವರ್ಗಾಯಿಸುವುದಾಗಿ ಕಾರು ತಯಾರಿಕಾ ಕಂಪನಿಗಳು ಘೋಷಿಸಿವೆ.
ಟಾಟಾ ಕಾರುಗಳ ಬೆಲೆ 75,000 – 1.45 ಲಕ್ಷ ರೂಪಾಯಿವರೆಗೆ ಕಡಿತ
ಟಿಯಾಗೋ – 75,000
ಟಿಗೋರ್ – 80,000
ಆಲ್ಟ್ರೋಜ್ – 1,10,000
ಪಂಚ್ – 85,000
ನೆಕ್ಸಾನ್ – 1,55,000
ಕರ್ವ್ – 65,000
ಹ್ಯಾರಿಯರ್ – 1,40,000
ಸಫಾರಿ – 1,45,000
ಟೊಯೋಟಾ ಕಾರುಗಳ ಬೆಲೆ ₹3.49 ಲಕ್ಷದವರೆಗೆ ಇಳಿಕೆ
ಗ್ಲಾನ್ಜಾ – 85,300
ಟೈಸರ್ – 1,10,000
ಹೈರೈಡರ್ – 65,400
ಇನ್ನೋವಾ ಕ್ರಿಸ್ಟಾ – 1,80,000
ಇನ್ನೋವಾ ಹೈಕ್ರಾಸ್ – 1,15,000
ಫಾರ್ಚುನರ್ – 3,49,000
ಲೆಜೆಂಡರ್ – 3,34,000
ಹೈಲಕ್ಸ್ – 2,52,000
ಕ್ಯಾಮ್ರಿ – 1,01,000
ವೆಲ್‌ಫೈರ್ – 2,78,000
ಮಹೀಂದ್ರಾ ಕಾರುಗಳ ಬೆಲೆ 75,000 – 1,55,000 ರೂಪಾಯಿವರೆಗೆ ಕಡಿತ
XUV 3XO (ಡೀಸೆಲ್) – 75,000
XUV 3XO (ಪೆಟ್ರೋಲ್) – 80,000
ಸ್ಕಾರ್ಪಿಯೋ N – 1,10,000
XUV 700 – 85,000
ಥಾರ್ 2WD – 1,55,000
ಥಾರ್ ರಾಕ್ಸ್ – 65,000
ಬೊಲೆರೋ – 1,40,000
ಸ್ಕಾರ್ಪಿಯೋ ಕ್ಲಾಸಿಕ್ – 1,45,000
ರೆನೊ ಕಾರುಗಳ ಬೆಲೆ 96,395 ರೂಪಾಯಿವರೆಗೆ ಇಳಿಕೆ
ಕ್ವಿಡ್ – 55,095
ಟ್ರೈಬರ್ – 80,195
ಕೈಗರ್ – 96,395
ಈ ಎಲ್ಲಾ ಬೆಲೆಗಳು ಸೆಪ್ಟೆಂಬರ್ 22ರ ನಂತರ ಜಾರಿಗೆ ಬರಲಿವೆ ಎಂದು ಕಾರು ತಯಾರಿಕಾ ಕಂಪನಿಗಳು ತಮ್ಮ ಪ್ರಕಟಣೆಯಲ್ಲಿ ತಿಳಿಸಿವೆ. ಹಬ್ಬದ ಋತುವಿನಲ್ಲಿ ಈ ಬೆಲೆ ಕಡಿತದ ಪ್ರಯೋಜನವನ್ನು ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಉಪಯೋಗಿಸಿಕೊಳ್ಳಲಿದ್ದಾರೆ ಎಂದು ಕಂಪನಿಗಳು ಆಶಾದಾಯಕವಾಗಿವೆ.