ಬೆಂಗಳೂರು: ನಗರದಲ್ಲಿ ಮತ್ತೆ ಟೋಯಿಂಗ್ (Towing) ಶುರುವಾಗಲಿದೆ. ಶೀಘ್ರದಲ್ಲೇ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಮತ್ತು ಟ್ರಾಫಿಕ್ ಪೊಲೀಸ್ ಜಂಟಿಯಾಗಿ ಟೋಯಿಂಗ್ ಆರಂಭಿಸಲು ಮುಂದಾಗಿವೆ.
ಈಗಾಗಲೇ ಜಿಬಿಎ ವ್ಯಾಪ್ತಿಯ ಐದು ನಗರ ಪಾಲಿಕೆಗಳು ಟೋಯಿಂಗ್ ವೆಹಿಕಲ್ ಖರೀದಿ ಮಾಡಿ ಟೋಯಿಂಗ್ ಆರಂಭಿಸಲು ಸಜ್ಜಾಗಿವೆ. ಆದರೆ, ಟೋಯಿಂಗ್ ಚಾರ್ಜಸ್ ನೋಡಿದರೆ ವಾಹನ ಸವಾರರನ್ನ ಶಾಕ್ ಆಗುತ್ತಾರೆ. ನಾಲ್ಕು ಚಕ್ರ ವಾಹನಗಳಿಗೆ ಟೋಯಿಂಗ್ ಚಾರ್ಜ್ 1,000 ರೂಪಾಯಿ, ದ್ವಿಚಕ್ರ ವಾಹನಕ್ಕೆ 500 ರೂಪಾಯಿ ನಿಗದಿ ಮಾಡಲಾಗಿದೆ. ಇದನ್ನೂ ಓದಿ: ಬೆಂಗಳೂರಿಗೆ ಟ್ರಾಫಿಕ್ ಸಿಟಿ ಹಣೆಪಟ್ಟಿ – ಸಂಚಾರ ದಟ್ಟಣೆ ಕಡಿವಾಣಕ್ಕೆ ಬ್ಲೂ ಪ್ರಿಂಟ್ ಸಿದ್ಧಪಡಿಸಿದ ಖಾಕಿ
ಪ್ರತ್ಯೇಕವಾಗಿ ವಾಹನ ಸವಾರರು 500 ರೂಪಾಯಿ ಟ್ರಾಫಿಕ್ ಫೈನ್ ಕೂಡ ಕಟ್ಟಬೇಕಿದೆ. ಇದು ಭಾರಿ ದುಬಾರಿ ಅಂತಾ ಖಾಸಗಿ ಸಾರಿಗೆ ಸಂಘಟನೆಗಳ ಒಕ್ಕೂಟ ಕಿಡಿಕಾರಿದೆ. ಟೋಯಿಂಗ್ ದರವನ್ನ ಇಳಿಕೆ ಮಾಡಬೇಕು. ಇಲ್ಲದಿದ್ದರೆ ಕಾನೂನು ಹೋರಾಟದ ಎಚ್ಚರಿಕೆ ನೀಡಿದೆ.

