ಬೆಂಗಳೂರು: ಬೆಂಗಳೂರಿನಲ್ಲಿ ಕಳೆದ ಮೂರು ದಿನಗಳಿಂದ ಟೋಯಿಂಗ್ ವಾಹನ ಸದ್ದು ಮಾಡುತ್ತಿಲ್ಲ. ಇದೀಗ ಮುಂದಿನ 15 ದಿನಗಳ ವರೆಗೆ ನಗರದಲ್ಲಿ ಟೋಯಿಂಗ್ ವ್ಯವಸ್ಥೆಯನ್ನು ಸುಧಾರಿಸಲು ಸ್ಥಗಿತಗೊಳಿಸಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
Advertisement
ಇಂದು ಟ್ರಾಫಿಕ್ ಆಯುಕ್ತರು ಟೋಯಿಂಗ್ ಸಿಬ್ಬಂದಿ ಜೊತೆ ಸಭೆ ನಡೆಸಿ ಬಳಿಕ ಗೃಹ ಕಚೇರಿ ಕೃಷ್ಣಾಗೆ ಆಗಮಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಗೃಹ ಸಚಿವರು, ಟೋಯಿಂಗ್ ವ್ಯವಸ್ಥೆ ಸುಧಾರಿಸುವ ಸಲುವಾಗಿ 15 ದಿನ ಸ್ಥಗಿತಗೊಳಿಸಲಾಗುವುದು. ನಾಳೆಯಿಂದ ನೋಪಾರ್ಕಿಂಗ್‍ನಲ್ಲಿ ಪಾರ್ಕ್ ಮಾಡಿದ್ರೆ ಪ್ರಕರಣ ದಾಖಲಾಗುತ್ತದೆ. ನೋ ಪಾರ್ಕಿಂಗ್ ಬೋರ್ಡ್‍ಗಳು ಈ ಹಿಂದೆ 50 ಮೀಟರ್‌ನಲ್ಲಿ ಇತ್ತು. ಇನ್ನುಮುಂದೆ 25 ಮೀಟರ್‌ನಲ್ಲಿ ಬೋರ್ಡ್ ಅಳವಡಿಕೆ ಮಾಡುತ್ತೇವೆ ಎಂದರು. ಇದನ್ನೂ ಓದಿ: ಭವಿಷ್ಯದಲ್ಲಿ ಸೋಂಕಿನ ಸಂಭಾವ್ಯ ಅಲೆಗಳನ್ನು ಎದುರಿಸಲು ಸಿದ್ಧರಾಗಬೇಕು: ಗೌರವ್ ಗುಪ್ತ
Advertisement
Advertisement
ಟೋಯಿಂಗ್ ಫೈನ್ ಜಾಸ್ತಿ ವಿಚಾರವಾಗಿ ಮಾತನಾಡಿ, ಇನ್ನು 15 ದಿನ ಖಾಸಗಿಯವರು ಟೋಯಿಂಗ್ ಮಾಡುವುದಿಲ್ಲ. ಪೊಲೀಸರೇ ಇರುತ್ತಾರೆ. ಪೊಲೀಸರ ಕ್ಯಾಮೆರಾದಲ್ಲಿ ಎಲ್ಲ ರೇಕಾರ್ಡ್ ಆಗುತ್ತದೆ. ಎಲ್ಲವನ್ನೂ ಪರಿಶೀಲನೆ ಮಾಡುತ್ತೇವೆ. ಫೈನ್ ಹೆಚ್ಚಳದ ಬಗ್ಗೆ ಮರುಪರಿಶೀಲನೆ ಮಾಡಿ ನಿರ್ಧಾರ ಮಾಡುತ್ತೇವೆ ಎಂದು ಮಾಹಿತಿ ಹಂಚಿಕೊಂಡರು. ಇದನ್ನೂ ಓದಿ: ಸುಧಾಕರ್ ಏನು ಸಿಎಂಗಿಂತ ದೊಡ್ಡವರಾ? ಬಿಜೆಪಿ ಶಾಸಕ ಕಿಡಿ
Advertisement
ಈ ನಡುವೆ ಟೋಯಿಂಗ್ ಇಲ್ಲದೆ ಇರುವ ಪರಿಣಾಮ ನಗರದಲ್ಲಿ ಸವಾರರು ಎಲ್ಲೆಂದರಲ್ಲಿ ವಾಹನ ನಿಲುಗಡೆ ಮಾಡೋದು ಹೆಚ್ಚಿದೆ. ಇದರಿಂದ ಅಂಗಡಿ ಮಾಲೀಕರು, ಮನೆ ಮಾಲೀಕರು ಕಿರಿಕಿರಿ ಅನುಭವಿಸುತ್ತಿದ್ದಾರೆ. ಶೀಘ್ರ ಟೋಯಿಂಗ್ ವಾಹನ ರಸ್ತೆಗೆ ಇಳಿಯಲಿ ಎಂದು ಅವರು ಬಯಸುತ್ತಿದ್ದಾರೆ. ಆದರೇ, ಟ್ರಾಫಿಕ್ ಪೊಲೀಸರೇನು ಸುಮ್ಮನೆ ಕುಳಿತಿಲ್ಲ. ನೋ ಪಾರ್ಕಿಂಗ್ ಪ್ರದೇಶದಲ್ಲಿ ನಿಲ್ಲಿಸೋ ಕಾರ್, ಬೈಕ್‍ಗಳಿಗೆ ವೀಲ್ ಲಾಕ್ ಮಾಡುತ್ತಿದ್ದಾರೆ. ಮೊಬೈಲ್‍ನಲ್ಲಿ ಫೋಟೋ ತೆಗೆದು ಕೇಸ್ ದಾಖಲಿಸಿಕೊಳ್ಳುತ್ತಿದ್ದಾರೆ.