ಶ್ರೀನಗರ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಕೈಗೊಂಡಿರುವ ಭಾರತ್ ಜೋಡೋ ಯಾತ್ರೆಯಲ್ಲಿ (Bharat Jodo Yatra) ಭಾಗವಹಿಸಲು ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (PDP) ಮುಖ್ಯಸ್ಥೆ ಮೆಹಬೂಬಾ ಮುಫ್ತಿ Mehbooba (Mufti) ಒಪ್ಪಿಕೊಂಡಿದ್ದಾರೆ. ಭಾರತ ಪ್ರಗತಿಯತ್ತ ಸಾಗಲು ಮತ್ತು ಬದಲಾವಣೆಗಾಗಿ ಭಾರತ್ ಜೋಡೋ ಯಾತ್ರೆಯಲ್ಲಿ ಭಾಗವಹಿಸುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ.
Advertisement
ರಾಹುಲ್ ಗಾಂಧಿ ನನ್ನನ್ನು ಭಾರತ್ ಜೋಡೋ ಯಾತ್ರೆಯಲ್ಲಿ ಭಾಗವಹಿಸುವಂತೆ ಆಹ್ವಾನ ನೀಡಿದ್ದಾರೆ. ಫ್ಯಾಸಿಸ್ಟ್ ಶಕ್ತಿಗಳಿಗೆ ಸವಾಲು ಹಾಕುವ ಧೈರ್ಯವಿರುವ ಯಾರೊಂದಿಗಾದರೂ ನಿಲ್ಲುವುದು ನನ್ನ ಕರ್ತವ್ಯ ಎಂದು ನಾನು ಭಾವಿಸಿದ್ದೇನೆ. ಹಾಗಾಗಿ ಭಾರತ್ ಜೋಡೋ ಯಾತ್ರೆಗೆ ಜೊತೆಯಾಗುತ್ತೇನೆ. ಭಾರತದ ಪ್ರಗತಿಗಾಗಿ ಹೆಜ್ಜೆ ಇಡುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಆರ್‌ಎಸ್‍ಎಸ್ ಭಾರತೀಯ ಸಂಸ್ಕೃತಿ, ಮೌಲ್ಯಗಳನ್ನು ಶ್ರೀಮಂತಗೊಳಿಸುತ್ತಿದೆ: ರವೀಂದ್ರ ಜಡೇಜಾ
Advertisement
Ive been formally invited to join @RahulGandhi ji for his Bharat Jodo Yatra in Kashmir today. Salute his indomitable courage & I believe it is my duty to stand with someone who has the courage to challenge fascist forces. Will be joining him in his march towards a better India.
— Mehbooba Mufti (@MehboobaMufti) December 27, 2022
Advertisement
ಸೆ.7ರಂದು ಕನ್ಯಾಕುಮಾರಿಯಲ್ಲಿ ಆರಂಭವಾದ ಭಾರತ್ ಜೋಡೋ ಯಾತ್ರೆಯು ತಮಿಳುನಾಡು, ಕೇರಳ, ಆಂಧ್ರಪ್ರದೇಶ, ಕರ್ನಾಟಕ, ತೆಲಂಗಾಣ, ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ, ಹರಿಯಾಣದ ಬಳಿಕ ವಿರಾಮ ನೀಡಲಾಗಿದೆ. 10 ರಾಜ್ಯಗಳ ಮೂಲಕ 2,800 ಕಿ.ಮೀ.ಗೂ ಹೆಚ್ಚು ಕ್ರಮಿಸಿರುವ ಯಾತ್ರೆ ಒಂಬತ್ತು ದಿನಗಳ ಚಳಿಗಾಲದ ವಿರಾಮದಲ್ಲಿದ್ದು, ಜನವರಿ 3 ರಂದು ಪುನರಾರಂಭಗೊಳ್ಳಲಿದೆ. ಇದನ್ನೂ ಓದಿ: ಬೆಳಗಾವಿ ಸೇರಿ 865 ಹಳ್ಳಿಗಳು ನಮಗೆ ಸೇರಬೇಕು – ಮಹಾರಾಷ್ಟ್ರ ಅಸೆಂಬ್ಲಿ ಸರ್ವಾನುಮತದ ನಿರ್ಣಯ