ಮಲಯಾಳಂ (Mollywood) ಚಿತ್ರರಂಗದಲ್ಲಿ ಹೀರೋಗಿರಿಯ ಸಿನಿಮಾಗಳಿಗೆ ಕಟ್ಟು ಬೀಳದೆ ತಮ್ಮದೇ ಆದ ಮಾದರಿಯಲ್ಲಿ ಸಿನಿಮಾಗಳನ್ನು ಮಾಡುತ್ತಿರುವ ಸ್ಟಾರ್ ನಟ ಟೋವಿನೊ ಥಾಮಸ್ ಅವರು ಒಂದರ ಮೇಲೊಂದು ಹಿಟ್ ಸಿನಿಮಾ ನೀಡುವ ಜೊತೆಗೆ ಅಭಿಮಾನಿಗಳ ಮನಗೆದ್ದಿದ್ದಾರೆ. ಟೋವಿನೋ ಥಾಮಸ್ (Tovino Thomas) ನಟನೆಯ ‘ಎಆರ್‌ಎಂ’ (ARM) ಸಿನಿಮಾದ ಫಸ್ಟ್ ಲುಕ್ ರಿಲೀಸ್ ಆಗಿ ಪ್ರೇಕ್ಷಕರ ಗಮನ ಸೆಳೆಯುತ್ತಿದೆ.
Advertisement
‘ಎಆರ್‌ಎಂ’ ಪ್ಯಾನ್ ಇಂಡಿಯಾ ಚಿತ್ರವಾಗಿದ್ದು, ಜಿತಿಲ್ ಲಾಲ್ ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಮ್ಯಾಜಿಕ್ ಫ್ರೇಮ್ಸ್ ಮತ್ತು ಯುಜಿಎಂ ಮೋಷನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಚಿತ್ರವನ್ನು ನಿರ್ಮಿಸಲಾಗುತ್ತಿದೆ. ಸಂಪೂರ್ಣ 3ಡಿಯಲ್ಲಿ ‘ಎಆರ್‌ಎಂ'(ARM) ಚಿತ್ರ ತಯಾರಾಗಲಿದ್ದು, ಮಲಯಾಳಂ ಚಿತ್ರರಂಗದ ಇತಿಹಾಸದಲ್ಲಿ ಅತಿ ದೊಡ್ಡ ಬಜೆಟ್ ಸಿನಿಮಾ ಇದಾಗಿದೆ.
Advertisement
Advertisement
‘ಎಆರ್‌ಎಂ’ ಸಿನಿಮಾ 3 ಯುಗಗಳ ಕಥೆ ಹೇಳುತ್ತದೆ. ಟೋವಿನೋ ಥಾಮಸ್ ಅವರು ಮಣಿಯನ್, ಅಜಯನ್ ಮತ್ತು ಕುಂಜಿಕೇಲು ಎಂಬ 3 ವಿಭಿನ್ನ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ದೃಶ್ಯ ವೈಭೋಗದಲ್ಲಿ ಮೂಡಿ ಬರಲಿರುವ ಈ ಚಿತ್ರ ಮಲಯಾಳಂ, ಹಿಂದಿ, ಇಂಗ್ಲಿಷ್, ತಮಿಳು, ತೆಲುಗು ಮತ್ತು ಕನ್ನಡ ಸೇರಿದಂತೆ 6 ಭಾಷೆಗಳಲ್ಲಿ ತಯಾರಾಗಲಿದೆ. ಇದನ್ನೂ ಓದಿ:ಧ್ರುವ ಸರ್ಜಾ ಮಕ್ಕಳ ನಾಮಕರಣದಲ್ಲಿ ಭಾಗಿಯಾದ ಸಂಜಯ್ ದತ್
Advertisement
ಕೃತಿ ಶೆಟ್ಟಿ(Krithi Shetty), ಐಶ್ವರ್ಯ ರಾಜೇಶ್ (Aishwarya Rajesh) ಮತ್ತು ಸುರಭಿ ಲ ನಾಯಕಿಯರಾಗಿ ನಟಿಸುತ್ತಿದ್ದು, ಪ್ರಮುಖ ನಟರಾದ ಬಾಸಿಲ್ ಜೋಸೆಫ್, ಜಗದೀಶ್, ಹರೀಶ್ ಉತ್ತಮನ್, ಹರೀಶ್ ಪೆರಾಡಿ, ಪ್ರಮೋದ್ ಶೆಟ್ಟಿ ಮತ್ತು ರೋಹಿಣಿ ಚಿತ್ರದಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಲಿದ್ದಾರೆ. ಸುಜಿತ್ ನಂಬಿಯಾರ್ ಚಿತ್ರಕಥೆಯನ್ನು ಬರೆದಿದ್ದಾರೆ ಮತ್ತು ದಿಬು ನೈನನ್ ಥಾಮಸ್ ಈ ಅದ್ಭುತ ಸಂಗೀತ ನೀಡಲಿದ್ದಾರೆ.