ಉಡುಪಿ: ಹೊಸ ವರ್ಷ ಬರಮಾಡಿಕೊಳ್ಳಲು ಜನ ಸಿದ್ಧರಾಗಿದ್ದಾರೆ. ಕರಾವಳಿ ಜಿಲ್ಲೆ ಉಡುಪಿ ಪ್ರತಿ ದಿನ ಲಕ್ಷ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಬರಮಾಡಿಕೊಳ್ಳುತ್ತಿದೆ.
ಮಲ್ಪೆ ಬೀಚ್ ಪ್ರವಾಸಿಗರಿಂದ ತುಂಬಿ ತುಳುಕಿದೆ. ವಾಟರ್ ಸ್ಪೋರ್ಟ್ಸ್‌ಗಳಲ್ಲಿ ಜನ ಮೈ ಮರೆತು ಸಂಭ್ರಮಿಸುತಿದ್ದಾರೆ. ಸೈಂಟ್ ಮೇರೀಸ್ ಐಲ್ಯಾಂಡ್, ಸ್ಪೀಡ್ ಬೋಟ್, ರೋಲಿಂಗ್ ಬಲೂನ್ ಜನರ ಖುಷಿಯನ್ನು ಹೆಚ್ಚು ಮಾಡುತ್ತಿದೆ.
Advertisement
ನ್ಯೂ ಇಯರ್ ಹಿನ್ನೆಲೆ ಉಡುಪಿಗೆ ಬರುವ ಪ್ರವಾಸಿಗರಿಗೆ ಫ್ರೆಶ್ ಫಿಶ್ ಖಾದ್ಯಗಳು ಸಿದ್ಧವಾಗುತ್ತಿವೆ. ಬಂಗುಡೆ, ಮಾಂಜಿ, ಫ್ರಾನ್ಜ್, ನಾಟಿಕೋಳಿಯ ತರೆಹೇವಾರಿ ಐಟಂ ರೆಡಿಯಾಗುತ್ತಿದೆ.
Advertisement
ಬೀಚ್‌ನಲ್ಲಿ ಹೊಸ ವರ್ಷ ಆಚರಿಸಿ, ಮೀನು ತಿಂದು ಮಸ್ತಿ ಮಾಡೋ ಜನಕ್ಕೆ ಸರ್ವ್ ಮಾಡೋದಕ್ಕೆ ಹೋಟೆಲ್, ಫುಡ್ ಕೋರ್ಟ್‌ಗಳು ಸರ್ವ ಸನ್ನದ್ಧವಾಗಿವೆ.
Advertisement
ಐಸ್ ಹಾಕದ ಸಮುದ್ರದ ತಾಜಾ ಮೀನುಗಳು ಮಸಾಲೆ ಹಚ್ಚಿಕೊಂಡು ರೆಡಿಯಾಗುತ್ತಿವೆ. ಆಹಾರ ಪ್ರಿಯರ ಬಾಯಲ್ಲಿ ನೂರೂರಿಸುವಂತಿದೆ ದೃಶ್ಯಗಳು.