ಬೀಜಿಂಗ್: ಪ್ರವಾಸಿಗರು ಸಂಚರಿಸುತ್ತಿದ್ದ ಸೇತುವೆ ಕುಸಿದಿರುವ ವಿಡಿಯೋ ವೈರಲ್ ಆಗಿದೆ. ಚೀನಾದ ಪ್ರವಾಸಿ ತಾಣದಲ್ಲಿ ಸೇತುವೆ ಕುಸಿದಿದ್ದು, 12ಕ್ಕೂ ಅಧಿಕ ಜನರು ಕೆಳಗೆ ಬಿದ್ದಿದ್ದಾರೆ. ಈ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ವರದಿಯಾಗಿದೆ.
ಸುಯಿಂಗ್ ದೇಶದ ಜಿಯಾಂಗಸು ಎಂಬಲ್ಲಿ ಈ ಘಟನೆ ನಡೆದಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಮಿಂಚಿನಂತೆ ಹರಿದಾಡುತ್ತಿದೆ. ಕಟ್ಟಿಗೆಯಿಂದ ನಿರ್ಮಿಸಲಾಗಿದ್ದ ಚಿಕ್ಕ ತೂಗು ಸೇತುವೆ ಮೇಲೆ ಏಕಕಾಲದಲ್ಲಿ ಅಧಿಕ ಜನರು ಸಂಚರಿಸಿದ್ದಾರೆ. ಹೀಗಾಗಿ ಅತಿ ಹೆಚ್ಚು ತೂಕದಿಂದಾಗಿ ಸೇತುವೆ ಕುಸಿದಿದೆ ಎಂದು ಹೇಳಲಾಗುತ್ತಿದೆ.
Advertisement
Advertisement
ಪ್ರವಾಸಿಗರು ಸೇತುವೆಯ ಮಧ್ಯ ಭಾಗದಲ್ಲಿ ನಿಂತು ಎರಡು ಬದಿಯ ಹಗ್ಗ ಹಿಡಿದು ಶೇಕ್(ಅಲ್ಲಾಡಿಸು) ಮಾಡಿದ್ದರಿಂದ ಸೇತುವೆ ಕುಸಿತವಾಗಿದೆ ಎಂದು ಬಹುತೇಕರು ತಮ್ಮ ಕಮೆಂಟ್ ಮೂಲಕ ಆಕ್ರೋಶ ಹೊರಹಾಕಿದ್ದಾರೆ. ಇನ್ನು ಕೆಲವರು ಘಟನೆಯಲ್ಲಿ ಯಾರಿಗೂ ಅಪಾಯವಾಗಿಲ್ಲ ಎಂಬುವುದು ಖುಷಿಯ ವಿಚಾರ ಎಂದು ಬರೆದುಕೊಂಡಿದ್ದಾರೆ. ಶೇಕ್ ಮಾಡಿದ್ದರಿಂದಲೇ ಸುಂದರ ಸೇತುವೆ ಕುಸಿತ ಕಂಡಿದ್ದು, ಎಲ್ಲರೂ ಸೇರಿ ನಮ್ಮ ಬ್ರಿಡ್ಜ್ ನಿರ್ಮಿಸಿಕೊಡಿ ಎಂದು ಬರೆದಿದ್ದಾರೆ.