ಬಳ್ಳಾರಿ: ಸರಣಿ ರಜೆಯಿದ್ದ ಕಾರಣ ದಕ್ಷಿಣಕಾಶಿ ಹಂಪಿಗೆ (Hampi) ಪ್ರವಾಸಿಗರ ದಂಡೇ ಹರಿದುಬರುತ್ತಿದ್ದು, ಮಾತಂಗ ಬೆಟ್ಟದಲ್ಲಿ (Matanga Hills) ಸಾವಿರಾರು ಜನರು ಸೂರ್ಯೋದಯವನ್ನು ಕಣ್ತುಂಬಿಕೊಂಡಿದ್ದಾರೆ.
ವಿಜಯನಗರ (Vijayanagar) ಜಿಲ್ಲೆಯ ಹೊಸಪೇಟೆ ತಾಲೂಕಿನ ದಕ್ಷಿಣ ಕಾಶಿ ಹಂಪಿಗೆ ಸಾವಿರಾರು ಪ್ರವಾಸಿಗರು ಬರುತ್ತಿದ್ದಾರೆ. ಸಾವಿರಾರು ಪ್ರವಾಸಿಗರು ಹಂಪಿಗೆ ಭೇಟಿ ನೀಡಿ, ಶ್ರೀವಿರೂಪಾಕ್ಷ ದೇವಾಲಯಕ್ಕೆ ಆಗಮಿಸಿ ದರ್ಶನ ಪಡೆದುಕೊಂಡಿದ್ದಾರೆ. ಕಲ್ಲಿನ ತೇರು, ಉಗ್ರನರಸಿಂಹ, ಮಹಾನವಮಿ ದಿಬ್ಬ ಸೇರಿದಂತೆ ನಾನಾ ಸ್ಮಾರಕಗಳನ್ನ ಕಣ್ತುಂಬಿಕೊಳ್ತಿದ್ದಾರೆ.ಇದನ್ನೂ ಓದಿ: ಡಿ.30ಕ್ಕೆ ಸಿಎಂ ಕೇರಳ ಪ್ರವಾಸ – ಕೆಸಿವಿ ಕಾರ್ಯಕ್ರಮದಲ್ಲಿ ಭಾಗಿ, ಪವರ್ ಫೈಟ್‌ಗೆ ಬ್ರೇಕ್ ಹಾಕೋಕೆ ತಂತ್ರ
ರಾಜ್ಯ ಸೇರಿದಂತೆ ಹೊರರಾಜ್ಯದಿಂದಲೂ ಸಾವಿರಾರು ಪ್ರವಾಸಿಗರು ಹಂಪಿಗೆ ಆಗಮಿಸುತ್ತಿದ್ದಾರೆ. ಇನ್ನೂ ಇಂದು ಬೆಳಿಗ್ಗೆ ಪ್ರವಾಸಿಗರು ಮಾತಂಗ ಬೆಟ್ಟ ಏರಿ ಸೂರ್ಯೋದಯ ಕಣ್ತುಂಬಿಕೊಂಡರು. ಚಳಿ ಲೆಕ್ಕಿಸದೇ ಸೂರ್ಯನ ಆಗಮನಕ್ಕೆ ಕಾಯುತ್ತಾ ದರ್ಶನ ಪಡೆದುಕೊಂಡರು.

