ಬಳ್ಳಾರಿ: ಸರಣಿ ರಜೆ ಹಿನ್ನೆಲೆ ದಕ್ಷಿಣ ಕಾಶಿ, ವಿಶ್ವವಿಖ್ಯಾತ ಹಂಪಿಗೆ (Hampi) ಪ್ರವಾಸಿಗರ (Tourist) ದಂಡು ಹರಿದು ಬಂದಿದೆ.
ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕಿನ ವಿಶ್ವಪ್ರಸಿದ್ಧ ಹಂಪಿ ಕಳೆದೆರಡು ದಿನಗಳಿಂದ ಪ್ರವಾಸಿಗರಿಂದ ತುಂಬಿ ತುಳುಕುತ್ತಿದೆ. ವಿಜಯ-ವಿಠ್ಠಲ ದೇಗುಲ, ಕಲ್ಲಿನ ತೇರು ಹಾಗೂ ವಿರೂಪಾಕ್ಷೇಶ್ವರ ದೇವಸ್ಥಾನದ ಬಳಿ ಸಹಸ್ರಾರು ಪ್ರವಾಸಿಗರು ಸೇರಿದ ಕಾರಣ ಹೆಚ್ಚಿನ ಜನದಟ್ಟಣೆಯಿಂದ ಹಲವೆಡೆ ಟ್ರಾಫಿಕ್ (Traffic) ಕಿರಿಕಿರಿ ಉಂಟಾಗಿತ್ತು.ಇದನ್ನೂ ಓದಿ: ಪಿಓಪಿ ಮೂರ್ತಿಗಳ ವಿಸರ್ಜನೆಯಿಂದ ಜಲಚರಗಳ ಸಾವು – ಮಣ್ಣಿನ ಗಣಪನ ಪೂಜಿಸಲು ಈಶ್ವರ್ ಖಂಡ್ರೆ ಮನವಿ
ಹಂಪಿಯ ಸ್ಮಾರಕಗಳ ಬಳಿ ಜನಸಾಗರವೇ ಹರಿದು ಬಂದಿದರೂ ಬ್ಯಾಟರಿ ಚಾಲಿತ ವಾಹನಗಳಿಲ್ಲದೇ ಪ್ರವಾಸಿಗರು ಪರದಾಡಿದರು. ಇತ್ತ ಸರಣಿ ರಜೆ ಹಿನ್ನೆಲೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬಂದಿದ್ದರಿಂದ ಜನಸಂದಣೆ ನಿಯಂತ್ರಿಸಲು ಪೊಲೀಸರ ಹರಸಾಹಸಪಟ್ಟರು.