ಚಿಕ್ಕಮಗಳೂರು: ಪ್ರವಾಸಕ್ಕೆ ಬಂದಿದ್ದ ಕೆಲವು ಯುವಕ ಯುವತಿಯರು ಮದ್ಯಪಾನ ಮಾಡಿ ರಸ್ತೆ ಮಧ್ಯೆ ಕಾರು ನಿಲ್ಲಿಸಿಕೊಂಡು ಉಳಿದ ಪ್ರವಾಸಿಗರಿಗೆ ಕಿರಿಕಿರಿ ಉಂಟುಮಾಡಿದ ಘಟನೆ ಮೂಡಿಗೆರೆ (Mudigere) ತಾಲೂಕಿನ ದೇವರಮನೆ ಗುಡ್ಡದಲ್ಲಿ ನಡೆದಿದೆ.
ನಿರಂತರ ಮಳೆಯಿಂದಾಗಿ ದೇವರಮನೆ ಗುಡ್ಡದಲ್ಲಿ (Devaramanegudda)ಎಲ್ಲೆಡೆ ಹಸಿರು ಮೈದುಂಬಿಕೊಂಡಿದೆ. ಇದರಿಂದಾಗಿ ಇಲ್ಲಿಗೆ ಬರುತ್ತಿರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ಇದರ ನಡುವೆ ನೂರಾರು ಯುವಕ-ಯುವತಿಯರು ರಸ್ತೆ ಮಧ್ಯೆ ಗಾಡಿ ನಿಲ್ಲಿಸಿಕೊಂಡು ಜೋರಾಗಿ ಹಾಡು ಹಾಕಿಕೊಂಡು ಡ್ಯಾನ್ಸ್ ಮಾಡಿದ್ದಾರೆ. ಉಳಿದ ಪ್ರವಾಸಿಗರು ಓಡಾಡಲು ದಾರಿ ಬಿಡದೆ ಕಿರಿಕಿರಿ ಉಂಟುಮಾಡಿದ್ದಾರೆ. ಇದನ್ನೂ ಓದಿ: ನೋಡ ನೋಡುತ್ತಿದ್ದಂತೆ ನೀರಿನಲ್ಲಿ ಕೊಚ್ಚಿ ಹೋಯ್ತು ಕುಟುಂಬ – ಐವರು ಪಾರು
ದೇವರಮನೆ ಗುಡ್ಡ ಭಕ್ತಿಯ ತಾಣವೂ ಹೌದು. ಸುಂದರ ಪ್ರಕೃತಿಯ ಮಧ್ಯೆ ಇರುವ ಕಾಲಭೈರವೇಶ್ವರನ ದೇಗುಲ ಹೊಯ್ಸಳರ ಕಾಲದಲ್ಲಿ ನಿರ್ಮಾಣವಾದ ಕಲ್ಲಿನ ಪುರಾತನ ದೇವಸ್ಥಾನ. ಪ್ರವಾಸದ ಜೊತೆ ಭಕ್ತರು ಭಕ್ತಿಯ ಪರಾಕಾಷ್ಠೆಯಿಂದಲೂ ಇಲ್ಲಿಗೆ ಬರುತ್ತಾರೆ. ಇದೀಗ ಇಲ್ಲಿಗೆ ಬರುವ ಕೆಲವು ಪ್ರವಾಸಿಗರು ಮದ್ಯಪಾನ ಮಾಡಿ ಬೇಕಾಬಿಟ್ಟಿ ವರ್ತಿಸಿದ್ದಾರೆ. ಸ್ಥಳೀಯರು ಹಾಗೂ ಇತರೇ ಪ್ರವಾಸಿಗರು ಹೇಳಿದರೂ ಯಾರ ಮಾತಿಗೂ ಕಿವಿಗೊಡದೆ ರಸ್ತೆ ಮಧ್ಯೆ ಹುಚ್ಚಾಟ ಪ್ರದರ್ಶಿಸಿದ್ದಾರೆ. ಈ ವರ್ತನೆಯಿಂದ ಮಹಿಳೆಯರು ಹಾಗೂ ಹೆಣ್ಣು ಮಕ್ಕಳಿಗೂ ಕಿರಿಕಿರಿಯಾಗಿದೆ.
ಪ್ರವಾಸಿಗರ ಪುಂಡಾಟ ನಿಯಂತ್ರಣಕ್ಕೆ ದೇವರಮನೆ ಗುಡ್ಡಕ್ಕೆ ಪೊಲೀಸರನ್ನು (Mudigere Polioce) ನಿಯೋಜಿಸುವಂತೆ ಗ್ರಾಮಸ್ಥರು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಕಾನ್‌ಸ್ಟೇಬಲ್‌ನಿಂದ ಹಿಡಿದು ಅಧಿಕಾರಿಗಳವರೆಗೂ ಹೊಸ ಕಾನೂನಿನ ಬಗ್ಗೆ ತರಬೇತಿ ನೀಡಿದ್ದೇವೆ: ಪರಮೇಶ್ವರ್